HEALTH TIPS

ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ಮುನಂಬಂ ಸಮರ ಸಮಿತಿ: ಕೇಂದ್ರ ಸಚಿವ ಕಿರಣ್ ರಿಜಿಜು ಅವರ ಭೇಟಿಗೂ ಮುನ್ನ ನೈಜ ಕಾನೂನು ಜಾರಿಗೆ ಬರಲೆಂದು ಒತ್ತಾಯ

ತಿರುವನಂತಪುರಂ: ಮುನಂಬಂ ಸಮರ ಸಮಿತಿ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕೇಂದ್ರ ಸಚಿವ ಕಿರಣ್ ರಿಜಿಜು ಮುನಂಬಂಗೆ ಬರಿಗೈಯಲ್ಲಿ ಬರಬಾರದು ಎಂದು ಪ್ರತಿಭಟನಾ ಸಮಿತಿಯ ಅಧ್ಯಕ್ಷ ಫಾ. ಜೋಶಿ ಮಯ್ಯಟಿಲ್ ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಕಿರಣ್ ರಿಜಿಜು ಮಂಗಳವಾರ ಮುನಂಬತ್‍ಗೆ ಆಗಮಿಸಲಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಭಾರತದಲ್ಲಿ ಜಾರಿಯಲ್ಲಿದ್ದ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುವಲ್ಲಿ ಮುಂದಾಳತ್ವ ವಹಿಸಿ, ಭಾರತೀಯ ಸಂವಿಧಾನ, ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿಹಿಡಿದ ರಿಜಿಜು ಅವರು ಅಪಾರ ಪ್ರಶಂಸಾರ್ಹರು ಎಮದು ಫಾ.ಜೋಶಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ತಿದ್ದುಪಡಿಗೆ ಇಲ್ಲಿಯವರೆಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇದರ ವಿರುದ್ಧ ಸುಪ್ರೀಂ ಕೋರ್ಟ್‍ನಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಕೇಳಿದ್ದೇವೆ. 16 ರಂದು ನ್ಯಾಯಾಲಯ ಅವುಗಳನ್ನು ಪರಿಗಣಿಸಲಿದೆ ಎಂದು ಕೂಡ ಕೇಳಿಬಂದಿದೆ.

ಈ ತಿದ್ದುಪಡಿಯಲ್ಲಿ ಮುನಂಬಮ್ ಜನರ ಸಮಸ್ಯೆ ಹೇಗೆ ಬಗೆಹರಿಯುತ್ತದೆ ಎಂಬುದು ಕೇರಳದಾದ್ಯಂತ ಈಗ ಎದ್ದಿರುವ ಪ್ರಶ್ನೆಯಾಗಿದೆ. ತಿದ್ದುಪಡಿಯ ಪರಿಣಾಮಕಾರಿತ್ವದ ಪರವಾಗಿ ಮತ್ತು ವಿರುದ್ಧವಾಗಿ ವಿವಿಧ ಹಂತಗಳಲ್ಲಿ ಅನೇಕ ಚರ್ಚೆಗಳು ನಡೆಯುತ್ತಿವೆ. ಉದ್ದೇಶಪೂರ್ವಕವಾಗಿ ದಾರಿತಪ್ಪಿಸುವ ಪ್ರಯತ್ನಗಳು ಸಹ ನಡೆಯುತ್ತಿವೆ ಎಂದು ಜೋಶಿ ಮಯ್ಯಟಿಲ್ ಗಮನಸೆಳೆದರು.

ಕಾನೂನು ಸಚಿವರ ಮುನಂಬಮ್ ಭೇಟಿ ಕೇವಲ ರಾಜಕೀಯ ನಾಟಕವಾಗುವುದನ್ನು ತಡೆಯಲು ಬಿಜೆಪಿ ಬುದ್ಧಿವಂತಿಕೆಯನ್ನು ತೋರಿಸಲಿದೆ ಎಂದು ಅವರು ಆಶಿಸಿದ್ದಾರೆ ಮತ್ತು ಈಗಾಗಲೇ ಅನೇಕ ದ್ರೋಹಗಳನ್ನು ಅನುಭವಿಸಿರುವ ಮುನಂಬಮ್‍ನ ಜನರು ಇನ್ನೇನನ್ನೂ ಭರಿಸಲಾರರು ಎಂದು ಅವರು ಹೇಳಿದರು.

ಆದ್ದರಿಂದ, ಕೇಂದ್ರ ಸರ್ಕಾರವು ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ತಿದ್ದುಪಡಿಯಲ್ಲಿ ಸೇರಿಸಲಾದ ವಿಭಾಗಗಳು, ಅವುಗಳ ವಿಷಯ ಮತ್ತು ಅವು ಒದಗಿಸುವ ಪರಿಹಾರವನ್ನು ಸ್ಪಷ್ಟಪಡಿಸಲು ಕಾನೂನು ಮತ್ತು ನ್ಯಾಯ ಸಚಿವಾಲಯದಿಂದ ಅಧಿಕೃತ ಘೋಷಣೆ ಮಾಡಲು ಸಿದ್ಧರಿದ್ದರೆ ಮತ್ತು ಇಚ್ಛಿಸಿದರೆ ಮಾತ್ರ ಕಿರಣ್ ರಿಜಿಜು ಮುಂಚೂಣಿಗೆ ಬರಬೇಕು ಎಂದು ಅವರು ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries