ಬದಿಯಡ್ಕ: ಕಾಶ್ಮೀರದ ಫಹಲ್ಗಾಮ್‍ನಲ್ಲಿ ಹಿಂದೂ ಪ್ರವಾಸಿಗರ ನರಮೇಧ ನಡೆಸಿ ಮೃಗೀಯ ಅಟ್ಟಹಾಸ ಮೆರೆದ ಇಸ್ಲಾಮಿಕ್ ಉಗ್ರಗಾಮಿಗಳ ಮತಾಂಧತೆಗೆದುರಾಗಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಬದಿಯಡ್ಕ ಇವರ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಬದಿಯಡ್ಕ ಗಣೇಶ ಮಂದಿರದಿಂದ ಹೊರಟ ಮೆರವಣಿಗೆಯಲ್ಲಿ ನೂರಾರು ಮಂದಿ ಪರಿವಾರ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಮುಖರಾದ ಹರೀಶ್ ನಾರಂಪಾಡಿ ಈ ಸಂದರ್ಭದಲ್ಲಿ ಮಾತನಾಡಿ ಹಿಂದೂ ಬಾಂಧವರು ನಿದ್ದೆಯಿಂದ ಹೊರಬಂದು ಹಿಂದೂ ವಂಶಹತ್ಯೆಗೆದುರಾಗಿ ಮೈಕೊಡವಿ ನಿಲ್ಲಬೇಕಾದ ಅನಿವಾರ್ಯತೆ ಬಂದೊದಗಿದೆ. ಪಾಕಿಸ್ತಾನಿ ಪ್ರಾಯೋಜಿತ ಭಯೋತ್ಪಾದಕ ಸಂಘಟನೆಗಳ ಕೃತ್ಯವನ್ನು ನಾವು ಒಕ್ಕೊರಲಿನಿಂದ ಖಂಡಿಸಬೇಕು. ಪಶ್ಚಿಮ ಬಂಗಾಳ, ಕಾಶ್ಮೀರದಲ್ಲಿ ಇದೀಗ ಧಾಳಿಯಾಗಿದ್ದು ನಾಳೆ ನಮ್ಮ ಕಾಲಬುಡಕ್ಕೂ ಬರಲಿದೆ. ಭಯೋತ್ಪಾದಕರ ದಾಳಿಯ ಬಗ್ಗೆ ಭಾರತದ ಮುಸ್ಲಿಂ ಸಮುದಾಯವು ದೇಶದ ಜನರ ರಕ್ಷಣೆಗಾಗಿ ಸೆಟೆದು ನಿಲ್ಲಬೇಕು. ಪಾಕಿಸ್ತಾನವು ಭಾರತದಿಂದ ಬೇರ್ಪಟ್ಟ ಬಳಿಕ ಭಾರತದಲ್ಲಿ ಪದೇ ಪದೇ ಭಯೋತ್ಪಾದಕ ಕೃತ್ಯಗಳು ನಡೆಯುತ್ತಿತ್ತು. ಅದನ್ನೆಲ್ಲ ಹಿಮ್ಮೆಟ್ಟಿಸಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಜಮ್ಮು ಕಾಶ್ಮೀರದ ಸಮಗ್ರ ಅಭಿವೃದ್ಧಿಗೆ ಯೋಜನೆಯನ್ನು ಜ್ಯಾರಿಗೊಳಿಸಿದೆ. ಈ ಸಂದರ್ಭ ಹಿಂದೂ ಮುಸ್ಲಿಂ ಎಂಬ ಯಾವುದೇ ಬೇಧಭಾವ ತೋರದೆ ಇಡೀ ಜನತೆಯ ಸಂಪೂರ್ಣ ಪ್ರಗತಿಗೆ ಹಲವಾರು ಯೋಜನೆಗಳನ್ನು ಕಾರ್ಯಗತಗೊಳಿಸುತ್ತದೆ. ಈ ವ್ಯವಸ್ಥೆಯು ಭಯೋತ್ಪಾದಕರ ಕೆಂಗಣ್ಣಿಗೆ ಗುರಿಯಾಗಿದ್ದು, ತಕ್ಕ ಶಾಸ್ತಿ ಮಾಡುವ ತನಕ ಕೇಂದ್ರ ಸರಕಾರವು ವಿರಮಿಸದು ಎಂದು ಅವರು ತಿಳಿಸಿದರು.
ಎಂ. ಸುಧಾಮ ಗೋಸಾಡ ದಾಳಿಯನ್ನು ಖಂಡಿಸಿ ಮಾತನಾಡಿದರು. ಪ್ರಮುಖರಾದ ಸಂಕಪ್ಪ ಭಂಡಾರಿ, ಸುನಿಲ್ ಕಿನ್ನಿಮಾಣಿ, ಸುರೇಶ್ ಶೆಟ್ಟಿ ಪರಂಕಿಲ, ಹರಿಪ್ರಸಾದ ರೈ ಪುತ್ರಕಳ, ಸಂತೋಷ್ ಗಾಡಿಗುಡ್ಡೆ, ಶ್ರೀಧರ ಬೆಳ್ಳೂರು, ಗೋಪಾಲಕೃಷ್ಣ ಮುಂಡೋಳುಮೂಲೆ, ತೇಜಸ್ವಿ ಹೇರಳ, ರೂಪೇಶ್ ಬದಿಯಡ್ಕ, ಅವಿನಾಶ್ ರೈ, ರವಿ ಬಿಎಂಎಸ್, ಬಾಲಕೃಷ್ಣ ಶೆಟ್ಟಿ ಕಡಾರು, ಮೈರ್ಕಳ ನಾರಾಯಣ ಭಟ್, ಭಾಸ್ಕರ ಬದಿಯಡ್ಕ ಹಾಗೂ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಮಂಜುನಾಥ ಮಾನ್ಯ ಸ್ವಾಗತಿಸಿ, ಗಣೇಶ್ ಮಾವಿನಕಟ್ಟೆ ವಂದಿಸಿದರು.




.jpg)
.jpg)
