ಮಂಜೇಶ್ವರ: ಉದ್ಯಾವರ ತೋಟ ಜಿ.ಎಂ.ಎಲ್.ಪಿ ಶಾಲೆಯಲ್ಲಿ ಶಾಲಾ ಮಕ್ಕಳ ಕಲಿಕೋತ್ಸವ ಹಾಗು ಸನ್ಮಾನ ಸಮಾರಂಭ ಇತ್ತೀಚೆಗೆ ಜರಗಿತು. ಬೆಳಗ್ಗೆ ಶಾಲಾ ಮಕ್ಕಳು ಹಾಗು ಅಂಗನವಾಡಿ ವಿದ್ಯಾರ್ಥಿಗಳಿಂದ ವಿವಿಧ ಶೈಕ್ಷಣಿಕ ಕಲಿಕಾ ಚಟುವಟಿಕೆಗಳು ನಡೆಯಿತು. ಬಳಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ವಿ ನೆರವೇರಿಸಿದರು. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿಯಿಂದ ಭಡ್ತಿ ಪಡೆದು ಜಿ.ಹೆಚ್.ಎಸ್.ಎಸ್ ಪಟ್ಲ ಶಾಲೆಯ ಪ್ರಾಂಶುಪಾಲರಾದ ರಾಜಗೋಪಾಲ ಕೆ ಇವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಬಿ.ಪಿ.ಸಿ ಸುಮಾದೇವಿ ಎಂ.ಪಿ.ಟಿ ಅಧ್ಯಕ್ಷೆ ಶಮೀಮ ಮುಳಿಂಜ, ಶಾಲಾ ಅಧ್ಯಾಪಿಕೆ ಕುಮಾರಿ ಐಶ್ವರ್ಯ, ಅಂಗನವಾಡಿ ಶಿಕ್ಷಕಿ ಪ್ರಮೀಳ ಅಭಿಲಾಶ್ ರಾವ್ ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ಸೇವೆಯಿಂದ ನಿವೃತ್ತರಾಗುತ್ತಿರುವ ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ್ ವಿ ಅವರನ್ನು ಪಿ.ಟಿ.ಎ ಅಧ್ಯಕ್ಷ ಅಬ್ದುಲ್ ಮುಸ್ಲಿಯಾರ್ ಶಾಲು ಹೊದಿಸಿ ಗೌರವಿಸಿದರು. ಶಾಲಾ ಮುಖ್ಯೋಪಾಧ್ಯಾಯ ಇಸ್ಮಾಯಿಲ್ ಮೀಯಪದವು ಸ್ಮರಣಿಕೆ ನೀಡಿ ಗೌರವಿಸಿದರು. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿಯಿಂದ ಭಡ್ತಿ ಪಡೆದು ಪಟ್ಲ ಶಾಲೆಗೆ ಪಾಂ್ರಶುಪಾಲರಾಗಿ ಆಯ್ಕೆಯಾದ ರಾಜಗೋಪಾಲ ಕೆ ಇವರನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್‍ರವರು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಮುಖ್ಯ ಶಿಕ್ಷಕ ಇಸ್ಮಾಯಿಲ್ ಮೀಯಪದವು ಸ್ಮರಣಿಕೆ ನೀಡಿದರು. ಕಾಯಕ್ರಮದಲ್ಲಿ ಹೆಚ್ಚಿನ ರಕ್ಷಕರು ಪಾಲ್ಗೊಂಡರು. ಮುಖ್ಯ ಶಿಕ್ಷಕ ಇಸ್ಮಾಯಿಲ್ ಸ್ವಾಗತಿಸಿ, ಅಧ್ಯಾಪಿಕೆ ಗಾಯತ್ರಿ ವಂದಿಸಿದರು. ರವಿಶಂಕರ ನೆಗಳಗುಳಿ ಹಾಗೂ ಮೋಹಿನಿ ಟೀಚರ್ ನಿರ್ವಹಿಸಿದರು.





