ಕಾಸರಗೋಡು:ರೈಲ್ವೇ ಸ್ಟೇಶನ್ ಮಾಸ್ಟರ್ ಕಂಠಪೂರ್ತಿ ಮದ್ಯ ಸೇವಿಸಿ ಕರ್ತವ್ಯ ಹಾಜರಾದ ಘಟನೆ ಬೆಳಕಿಗೆ ಬಂದಿದೆ. ರಾಜಸ್ಥಾನ ನಿವಾಸಿ ಘನಶ್ಯಾಮ್ ಮಹಾಣ್ ಎಂಬ ಸ್ಟೇಶನ್ ಮಾಸ್ಟರ್ ಕುಡಿದು ಕರ್ತವ್ಯಕ್ಕೆ ಹಾಜರಾಗಿ ಅವಾಂತರ ಸೃಷ್ಟಿಸಿದರು.
ಬಳಿಕ ಬದಲಿ ಅಧಿಕಾರಿ ಆಗಮಿಸಿ ಕರ್ತವ್ಯ ಜವಾಬ್ದಾರಿ ವಹಿಸಿ ಕೊನೆಗೂ ಸಮಸ್ಯೆಗೆ ಪರಿಹಾರವೊದಗಿಸಿದರು. ಘಟನೆಯ ಬಗ್ಗೆ ರೈಲ್ವೇ ಆಕ್ಟ್ ಪ್ರಕಾರ ಆರ್.ಪಿ.ಎಫ್. ಪ್ರಕರಣ ದಾಖಲಿಸಿದ್ದಾರೆ.





