ಕಾಸರಗೋಡು: ಜಿಲ್ಲೆಯ ವಿವಿಧೆಡೆ ಭಾನುವಾರ ಬೆಳಗ್ಗಿನ ಜಾವ ಸಾಮಾನ್ಯ ಮಳೆಯಾಗಿದೆ. ಬದಿಯಡ್ಕ, ಕುಂಬಳೆ, ಸೀತಾಂಗೋಳಿ, ಪೆರ್ಲ, ಸಹಿತ ವಿವಿಧೆಡೆ ಗುಡುಗಿನಿಂದ ಕೂಡಿದ ಮಳೆಯಾಗಿದೆ.
ಭಾನುವಾರ ಹಗಲು ಮೋಡಕವಿದ್ದ ವಾತಾವರಣ ಮುಂದುವರಿದಿತ್ತು. ಕೇರಳದಲ್ಲಿ ಏ. 21ರ ವರೆಗೂ ಬೇಸಿಗೆ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೊತೆಗೆ 50ಕಿ.ಮೀ ವೇಗದಲ್ಲಿ ಗಾಳಿಗೂ ಸಾಧ್ಯತೆಯಿದ್ದು, ಜನತೆ ಜಾಗ್ರತೆ ಪಾಲಿಸುವಂತೆ ಸೂಚಿಸಲಾಗಿದೆ. ಕಾಸರಗೋಡು ಸೇರಿದಂತೆ ಕಳೆದ ಕೆಲವು ದಿವಸಗಳಿಂದ ಸಾಮಾನ್ಯ ಮಳೆಯಾಗುತ್ತಿದೆ.





