ಮಂಜೇಶ್ವರ: ಬೇಸಿಗೆ ರಜೆಯಲ್ಲಿ ಮಕ್ಕಳ ಸೃಜನಶೀಲ ಪ್ರತಿಭೆಯನ್ನು ಪತ್ತೆಹಚ್ಚಿ ಪೋಷಿಸಲು ರಾಜ್ಯ ಲೈಬ್ರರಿ ಕೌನ್ಸಿಲ್ ಆಯೋಜಿಸಿದ್ದ ಮಂಜೇಶ್ವರ ತಾಲ್ಲೂಕು ಮಟ್ಟದ ವಾಚನಾ ತರಬೇತಿ ವರ್ಣ ಕುಟೀರ ವಾಚನಾ ಗರಡಿಯನ್ನು ಅಟ್ಟೆಗೋಳಿ ಗ್ರಂಥಾಲಯದಲ್ಲಿ ಜಿಲ್ಲಾ ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಾ.ಪಿ.ಪ್ರಭಾಕರನ್ ಉದ್ಘಾಟಿಸಿದರು.
ತಾಲೂಕು ಅಧ್ಯಕ್ಷ ವಿ.ಅಬ್ದುಲ್ಲ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಲೈಬ್ರರಿ ಕೌನ್ಸಿಲ್ ಸದಸ್ಯ ಪಿ.ಕೆ. ಅಹ್ಮದ್ ಹುಸೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇ.ಕೆ. ಸುನೀಲ್ ಕುಮಾರ್, ಬಶೀರ್, ಜಯನ್ ಕಾಡಗಂ ಕಾರ್ಯಾಗಾರದ ನೇತೃತ್ವ ವಹಿಸಿದ್ದರು. ತಾಲೂಕು ಕಾರ್ಯದರ್ಶಿ ಡಿ. ಕಮಲಾಕ್ಷ ಸ್ವಾಗತಿಸಿ, ಶ್ರೀಕುಮಾರಿ ಟೀಚರ್ ವಂದಿಸಿದರು. ತಾಲ್ಲೂಕಿನ 52 ಗ್ರಂಥಾಲಯಗಳ ಪ್ರತಿನಿಧಿಗಳು ತರಗತಿಯಲ್ಲಿ ಭಾಗವಹಿಸಿದ್ದರು.




.jpg)
