ಮಹಿಳೆಯರಲ್ಲಿ ಇತ್ತೀಚಿಗೆ ಹೆಚ್ಚಾಗುತ್ತಿರುವ ಗರ್ಭಕಂಠದ ಕ್ಯಾನ್ಸರ್ ಆತಂಕಕ್ಕೆ ಕಾರಣವಾಗುತ್ತಿದೆ. ವಿಶ್ವದ ಬಹುತೇಕ ದೇಶಗಳಲ್ಲಿನ ಮಹಿಳೆಯರಲ್ಲಿ ಈ ಸಮಸ್ಯೆ ಅಧಿಕವಾಗಿ ಕಂಡುಬರುತ್ತಿದೆ. ಭಾರತದಲ್ಲಿಯೂ ಈ ಪ್ರಮಾಣ ಹೆಚ್ಚಾಗಿದೆ. ಗರ್ಭಕಂಠದ ಕ್ಯಾನ್ಸರ್‌ನಿಂದ ಜಾಗತಿಕ ಮಟ್ಟದಲ್ಲಿ ಶೇ.1ರಷ್ಟು ಸಾವಿನ ಪ್ರಮಾಣವಿದೆ. ಆದ್ರೆ ಭಾರತದಲ್ಲಿ ಈ ಪ್ರಮಾಣ 1.6ರಷ್ಟಿದೆ. ಅಂದರೆ ಭಾರತದಲ್ಲಿ ಈ ಕ್ಯಾನ್ಸರ್ ಕಾಣಿಸಿಕೊಂಡವರು ಹೆಚ್ಚಾಗಿ ಮೃತಪಟ್ಟಿದ್ದಾರೆ.
ಹಾಗೆ ಪ್ರತಿ ವರ್ಷ ಭಾರತ ಒಂದರಲ್ಲೇ ಸುಮಾರು 80 ಸಾವಿರಕ್ಕೂ ಹೆಚ್ಚು ಮಹಿಳೆಯರು ಈ ಗರ್ಭಕಂಠದ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ ಎಂಬುದು ಕೂಡ ಇತ್ತೀಚಿನ ವರದಿಯಲ್ಲಿದೆ. ಹಾಗೆ 35 ಸಾವಿರ ಮಹಿಳೆಯರು ಈ ಕ್ಯಾನ್ಸರ್‌ಗೆ ಬಲಿಯಾಗುತ್ತಾರೆ. ಈ ಜಾಗತಿಕ ಮಟ್ಟದಲ್ಲಿ ಅತ್ಯಧಿಕ ಸಂಖ್ಯೆಯಾಗಿದೆ. ಹೀಗಾಗಿ ಈ ಗರ್ಭಕಂಠದ ಕ್ಯಾನ್ಸರ್ ಅಪಾಯ ಕಡಿಮೆ ಮಾಡುವ ಸಲುವಾಗಿ ಸರ್ಕಾರ ಹಲವು ರೀತಿಯಲ್ಲಿ ಶ್ರಮಿಸುತ್ತಿದೆ.
ಕಳೆದ 2024ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಈ ಗರ್ಭಕಂಠ ಕ್ಯಾನ್ಸರ್ ತಡೆಯ ಉದ್ದೇಶದಿಂದಾಗಿ ಹಲವು ಯೋಜನೆಗಳ ರೂಪಿಸಿತ್ತು, ಹಾಗೆ ಅನುದಾನಗಳ ಘೋಷಿಸಿತ್ತು. ಅದರಲ್ಲಿ ಮುಖ್ಯವಾಗಿ 9ರಿಂದ 14 ವರ್ಷದೊಳಗಿನ ಬಾಲಕಿಯರಿಗೆ ಈ ಕ್ಯಾನ್ಸರ್ ಲಸಿಕೆ ನೀಡಲು ಅನುದಾನ ಮೀಸಲಿಡುವುದಾಗಿ ಹೇಳಲಾಗಿತ್ತು. ಹಾಗೆ ಈ ಲಸಿಕೆಯು ಸೀರಮ್ ಇನ್‌ಸ್ಟಿಟ್ಯೂಟ್ ತಯಾರಿಸಲಿದ್ದು, ಒಂದು ಡೋಸ್‌ನ ಬೆಲೆ 2 ಸಾವಿರ ರೂಪಾಯಿಯಾಗಿದೆ.
ಸದ್ಯ ಈಗ ದೆಹಲಿಯಲ್ಲಿ ಈ ಗರ್ಭಕಂಠದ ಕ್ಯಾನ್ಸರ್ ಸಂಬಂಧ ಭಾರತದ ಮೊದಲ ದೇಶೀಯವಾಗಿ ಅಭಿವೃದ್ಧಿಪಡಿಸಿದ, ಪಾಯಿಂಟ್-ಆಫ್-ಕೇರ್ RT-PCR ಆಧಾರಿತ HPV ರೋಗನಿರ್ಣಯ ಪರೀಕ್ಷಾ ಕಿಟ್‌ಗಳನ್ನು ಪ್ರಾರಂಭಿಸಲಾಗಿದೆ. ಜೈವಿಕ ತಂತ್ರಜ್ಞಾನ ಇಲಾಖೆ, ಗ್ರ್ಯಾಂಡ್ ಚಾಲೆಂಜಸ್ ಇಂಡಿಯಾ ಮತ್ತು ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ಸಹಾಯ ಮಂಡಳಿ ಜೊತೆಗೂಡಿ ಈ ಹೊಸ ಕ್ರಾಂತಿಗೆ ನಾಂದಿ ಹಾಡಲಾಗಿದೆ. ಇದರಿಂದ ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಸಮಸ್ಯೆ ಗುರುತಿಸಿ ಸೂಕ್ತ ಚಿಕಿತ್ಸೆಗೆ ನೆರವಾಗುವ ಜೊತೆಗೆ ಮರಣ ಪ್ರಮಾಣ ತಗ್ಗಿಸುವ ಗುರಿ ಹೊಂದಲಾಗಿದೆ.
ಗರ್ಭಕಂಠದ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತಿರಲು ಮುಖ್ಯ ಕಾರಣ ತಡವಾಗಿ ರೋಗ ನಿರ್ಣಯ, ಹಾಗೆ ಆರಂಭಿಕ ಹಂತದಲ್ಲಿ ಚಿಕಿತ್ಸೆ ಸಿಗದಿರುವುದಾಗಿದೆ. ಅಲ್ಲದೆ ವಿಶ್ವದಲ್ಲೇ ಈ ಗರ್ಭಕಂಠದ ಕ್ಯಾನ್ಸರ್‌ನಿಂದಾಗುವ ಸಾವಿನ ಶೇ.25ರಷ್ಟು ಮಂದಿ ಭಾರತದವರು. ಹಾಗೆ ಭಾರಯದಲ್ಲಿ ಈ ಕುರಿತ ಜಾಗೃತಿ ಕಡಿಮೆ ಇರುವುದು ಬಹುದೊಡ್ಡ ಹಿನ್ನಡೆಯಾಗಿದೆ.
HPV ಕಿಟ್‌ಗಳು ಇದಕ್ಕಿಂತ ಮುನ್ನವೇ ಮಾರುಕಟ್ಟೆಯಲ್ಲಿ ಸಿಗುತ್ತವೆ, ಆದ್ರೆ ಈ ಎಲ್ಲವು ಬಹಳ ದುಬಾರಿಯಾಗಿವೆ. ಹಾಗೆ ಈ ಎಲ್ಲವು ಅಂತಾರಾಷ್ಟ್ರೀಯ ಕಿಟ್‌ಗಳಾಗಿವೆ. ಈ ಕಿಟ್‌ಗಳನ್ನು ಯಾವುದೇ ಸರ್ಕಾರಿ ಅನುದಾನಿತ ಕಾರ್ಯಕ್ರಮಗಳ ಮೂಲಕ ವಿತರಿಸಲು ಸಾಧ್ಯವಿರಲಿಲ್ಲ. ಹೀಗಾಗಿ ನಮಗೆ ದೇಶೀಯವಾಗಿ ಅಭಿವೃದ್ಧಿ ಪಡಿಸಲಾದ ಕಿಟ್‌ನ ಅವಶ್ಯಕತೆ ಇತ್ತು. HPV ಕಿಟ್ ಹೇಗೆ ಕೆಲಸ ಮಾಡುತ್ತವೆ? ಈ ಹೊಸ HPV ಕಿಟ್‌ಗಳು ರಿಯಲ್ ಟೈಮ್ ವರದಿ ನೀಡಲಿವೆ. ಆರ್‌ಟಿ ಪಿಸಿಆರ್ ಟೆಸ್ಟ್‌ನಂತೆ ಕ್ಷಣದಲ್ಲಿಯೇ ನಿಖರ ಹಾಗೂ ವೇಗದ ವರದಿ ನೀಡಲಿವೆ. ಈ ಗರ್ಭಕಂಠದ ಕ್ಯಾನ್ಸರ್‌ಗೆ ಜಾಗತಿಕವಾಗಿ ಕಾರಣವಾಗುತ್ತಿರುವ 8 ವಿಧವಾದ ಹೈ-ರಿಸ್ಕ್ HPV ಜೀನೋಟೈಪ್‌ಗಳನ್ನು ಪತ್ತೆಹಚ್ಚಲು ಈ ಕಿಟ್‌ಗಳು ನೆರವಾಗಲಿವೆ. ಹೀಗಾಗಿ ಈ ಕಿಟ್‌ನ ವರದಿ ಹೆಚ್ಚು ನಿಖರವಾಗಿರಲಿದೆ. "ನವರತ್ನ ಉಂಗುರ ಎಂಬ ಅದೃಷ್ಟ..! ಬಾಲಿವುಡ್ ನಟರ ಜೀವನ ಬದಲಾಗಿದ್ದು ಹೀಗೆ..!" ಈ ಕಿಟ್‌ನಿಂದ ಸುಲಭವಾಗಿ ಆರೋಗ್ಯ ಕಾರ್ಯಕರ್ತರು ಸಹ ಪರೀಕ್ಷೆ ನಡೆಸಬಹುದು. ಹ್ಯೂಮನ್ ಪ್ಯಾಪಿಲೋಮವೈರಸ್ ಹಲವು ರೀತಿಯ ಅನಾರೋಗ್ಯ ಉಂಟು ಮಾಡುವ ಅಪಾಯಕಾರಿ ವೈರಸ್ ಆಗಿವೆ. ಅದರಲ್ಲಿ ಇವು ಗರ್ಭಕಂಠದ ಕ್ಯಾನ್ಸರ್‌ಗೆ ಕೂಡ ಕಾರಣವಾಗುತ್ತಿವೆ.






