ಚೂಯಿಂಗ್ ಗಮ್ ಸವಿಯೋದು ಮಕ್ಕಳಿಗೆ ಮಾತ್ರವಲ್ಲ ಎಲ್ಲರಿಗೂ ಇಷ್ಟವಾಗುತ್ತೆ. ಅದರಲ್ಲೂ ಯುವಜನತೆ ಹೆಚ್ಚಾಗಿ ಚೂಯಿಂಗ್ ಗಮ್ ಸವಿಯುವುದು ನೋಡಬಹುದು. ಇನ್ನು ಕೆಲವು ದೇಶಗಳಲ್ಲಿ ಚೂಯಿಂಗ್ ಗಮ್ ಬ್ಯಾನ್ ಕೂಡ ಮಾಡಲಾಗಿದೆ. ಏಕೆಂದರೆ ಇದನ್ನು ಸವಿದ ಬಳಿಕ ಜನರು ಎಲ್ಲೆಂದರಲ್ಲಿ ಉಗಿಯುವುದು, ಹಚ್ಚುವುದು ಹೆಚ್ಚಾಗಿರುತ್ತೆ. ಹಾಗೆ ರಸ್ತೆಗಳ ಮೇಲೆ, ಸಾರ್ವಜನಿಕ ಸ್ಥಳದಲ್ಲಿ ಚೂಯಿಂಗ್ ಗಮ್‌ಗಳ ಹಾವಳಿ ಹೆಚ್ಚಾಗಿರುತ್ತೆ.
ಕೆಲವರ ಪ್ರಕಾರ ಚೂಯಿಂಗ್ ಗಮ್ ಅಗಿಯುವುದು ಒಸಡುಗಳು ಬಲವಾಗಲು ಕಾರಣವಾಗುತ್ತದೆ ಹಾಗೆ ಮುಖದಲ್ಲಿರುವ ಕೊಬ್ಬನ್ನು ಕರಗಿಸಲು ಇದು ಅತ್ಯುತ್ತಮ ವ್ಯಾಯಾಮ ಎಂದುಕೊಂಡಿರುತ್ತಾರೆ. ಆದ್ರೆ ಈ ಮಾತು ಎಷ್ಟರ ಮಟ್ಟಿಗೆ ಸರಿ, ಚೂಯಿಂಗ್ ಗಮ್ ತಿನ್ನುವುದರಿಂದ ಆಗುವ ಲಾಭವಾದರೂ ಏನು? ಅದರಿಂದ ಆಗುವ ಅಪಾಯವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮುಖದ ಫಿಟ್ನೆಸ್ ಗಮ್ ಎಂದೂ ಕರೆಯಲ್ಪಡುವ ಚೂಯಿಂಗ್ ಗಮ್ ಸವಿಯುವುದು ದವಡೆಯ ರಚನೆ ಸುಂದರವಾಗಿಸಲಿದೆಯಂತೆ. ಇದು ಪರಿಣಾಮಕಾರಿ ವ್ಯಾಯಾಮ ಎನ್ನುವುದರಲ್ಲಿ ಅನುಮಾನವಿಲ್ಲ. ಏಕೆಂದರೆ ಬಾಯಿಯು ಒಂದು ನಿಮಿಷದಲ್ಲಿ 100ಕ್ಕೂ ಹೆಚ್ಚು ಬಾರಿ ಅಗಿಯುವ ಪ್ರಕ್ರಿಯೆಗೆ ಒಳಗಾಗುವ ಕಾರಣ ದವಡೆ ಗಟ್ಟಿಯಾಗುವ ಜೊತೆಗೆ ಅನಗತ್ಯ ಕೊಬ್ಬು ಕರಗಿಸಲು ಹಾಗೆ ಗಟ್ಟಿಯಾದ ಒಸಡು ರೂಪಿಸಲು ಸಹಕಾರಿಯಾಗಿದೆ. ಅನೇಕ ಬ್ರಾಂಡ್‌ಗಳು ಕೂಡ ಮುಖಕ್ಕೆ ಇದೊಂದು ವ್ಯಾಯಾಮ ಎಂಬುದಾಗಿಯೇ ಜನರನ್ನು ಸೆಳೆಯುವ ಕಾರ್ಯ ಮಾಡುತ್ತಿವೆ.
ಒಸಡುಗಳು ನಿಮ್ಮ ಮುಖ ಮತ್ತು ಕುತ್ತಿಗೆಯಲ್ಲಿ ಬಹು ಸ್ನಾಯುಗಳನ್ನು ಕೆಲಸ ಮಾಡುತ್ತವೆ ಎಂದು ಸಾಮಾನ್ಯವಾಗಿ ನಂಬಲಾಗಿದೆ. ಆದರೆ ಇದು ವಿಜ್ಞಾನದಿಂದ ಸಾಬೀತಾಗಿಲ್ಲ. ಹೆಚ್ಚು ಹೆಚ್ಚು ಚೂಯಿಂಗ್ ಗಮ್ ಸವಿಯುವುದರಿಂದ ಮುಖದ ಆಕಾರ ಚೌಕಾಕಾರವಾಗಿ ಬದಲಾಗುತ್ತದೆ. ಅಥವಾ ಆ ರೀತಿ ಕಾಣಿಸುವಂತೆ ಮಾಡಬಹುದು. ಇನ್ನೊಂದು ಕಡೆ ಈ ಚೂಯಿಂಗ್ ಗಮ್ ಅಗಿಯುವುದರಿಂದ ವ್ಯಾಯಾಮ ಆಗಬಹುದು ಆದ್ರೆ ಮುಖ ಲಕ್ಷಣಗಳು ಬದಲಾಗುತ್ತದೆ ಎಂಬುದಕ್ಕೆ ಪುರಾವೆಳಿಲ್ಲ.
ಹಾಗೆ ಚೂಯಿಂಗ್ ಗಮ್ ಸವಿಯುವುದರಿಂದ ಸ್ನಾಯುಗಳು ಊದಿಕೊಳ್ಳುತ್ತವೆ ಎಂಬುದು ಕೂಡ ಸಾಬೀತಾಗಿಲ್ಲ. ನಿರಂತರವಾಗಿ ಚೂಯಿಂಗ್ ಗಮ್ ಸವಿಯುವುದು ನಿಮ್ಮ ಅಗಿಯುವಿಕೆಯ ಸ್ನಾಯು ಚೆನ್ನಾಗಿ ಕೆಲಸ ಮಾಡಲು ಸಹಾಯಕವಾಗಿದೆ. ಇದರ ಸ್ನಾಯುಗಳು ಬಲವಾಗುತ್ತವೆ. ಕೆಲವರು ಸಣ್ಣ ಆಕಾರದ ಬಾಯಿ ಅಥವಾ ಬಾಯಿಯ ಒಳಪದರ ಹೊಂದಿದ್ದರೆ ಅಂತವರು ಚೂಯಿಂಗ್ ಗಮ್ ಸವಿಯಬೇಕು. ಇದರಿಂದ ಸ್ನಾಯುಗಳು ಹಿಗ್ಗುತ್ತವೆ. ಕಿರಿದಾದ ದವಡೆಗಳಿದ್ದರೆ ಚೂಯಿಂಗ್ ಗಮ್ ಸವಿಯುವುದರಿಂದ ಸಮಸ್ಯೆಗೆ ಸ್ವಲ್ಪ ರಿಲೀಫ್ ಸಿಗಬಹುದು.
ಇದಿಷ್ಟು ನಿಮ್ಮ ಬಾಯಿಗೆ ಸಂಬಂಧಿಸಿದ ಒಂದಿಷ್ಟು ಉಪಯೋಗವಾಗಿದೆ
ಬಾಯಿಯ ವಾಸನೆ ತಡೆಯಲು ಇದು ಸಹಕಾರಿ
ಚೂಯಿಂಗ್ ಗಮ್ ಸಾಮಾನ್ಯವಾಗಿ ಬಾಯಿ ವಾಸನೆ ತಡೆಯುವ ಉದ್ದೇಶದಿಂದ ಬಹುತೇಕ ಮಂದಿ ಸೇವಿಸುತ್ತಾರೆ. ಈಗ ಹಲವು ಬಗೆಯ ಚೂಯಿಂಗ್ ಗಮ್‌ಗಳು, ವಿವಿಧ ರೀತಿ ಸುವಾಸನೆಯುಕ್ತ ಬಗೆಯಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತವೆ. ಹಲವರು ಊಟದ ಬಳಿಕ ನಿದ್ರೆಯಿಂದ ಎಚ್ಚರಗೊಂಡ ಬಳಿಕ ಸವಿಯಲು ಮುಂದಾಗುತ್ತಾರೆ.
ಒತ್ತಡವನ್ನು ಕಡಿಮೆ ಮಾಡಲಿದೆ
ಚೂಯಿಂಗ್ ಗಮ್ ವಿಶ್ರಾಂತಿಯನ್ನು ಉತ್ತೇಜಿಸುವ ಮೂಲಕ ಮತ್ತು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ನೀವು ಹೆಚ್ಚು ಒತ್ತಡದ ನಡುವೆ ವಿಶ್ರಾಂತಿ ಪಡೆಯಲು ಯತ್ನಿಸುವಾಗ ಇದನ್ನು ಸವಿಯಬಹುದು.
ಇನ್ನು ಈ ಚೂಯಿಂಗ್ ಗಮ್‌ನಗಳು ನೈಸರ್ಗಿಕ ವಸ್ತುಗಳಿಂದ ಮಾಡಿದ ವಸ್ತುಗಳಲ್ಲ. ಹೀಗಾಗಿ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆ, ಉಸಿರಾಟ ಸಂಬಂಧಿ ಸಮಸ್ಯೆ ಇರುವವರು ಸವಿಯುವುದು ಸೂಕ್ತವಲ್ಲ. ಹಾಗೆ 3 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡುವುದು ಕೂಡ ಅಪಾಯಕಾರಿಯಾಗಿದೆ.






