ತಿರುವನಂತಪುರಂ: ಕಳೆದ ವರ್ಷ ಮಾಲಿವುಡ್ (Mollywood) ಚಿತ್ರರಂಗದಲ್ಲಿ ಹಲವು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಆದರೆ ಈ ವರ್ಷ ಮಾಲಿವುಡ್‌ನಲ್ಲಿ ದೊಡ್ಡ ಕಮಾಯಿ ಮಾಡಿದ ಸಿನಿಮಾಗಳು ಅಷ್ಟಾಗಿ ಬಂದಿಲ್ಲ.
ಯಾವ ರೀತಿ ಲಾಭ ಗಳಿಸುತ್ತದೆ ಎನ್ನುವುದರ ಪಟ್ಟಿಯನ್ನು ರಿವೀಲ್ ಮಾಡುತ್ತದೆ.
ಮಾರ್ಚ್ ತಿಂಗಳಿನಲ್ಲಿ ತೆರೆಕಂಡ ಸಿನಿಮಾಗಳ ಲಾಭ - ನಷ್ಟದ ಪಟ್ಟಿಯನ್ನು ಕೇರಳ ಚಲನಚಿತ್ರ ನಿರ್ಮಾಪಕರ ಸಂಘ ರಿವೀಲ್ ಮಾಡಿದೆ.
ಮಾರ್ಚ್ ತಿಂಗಳವೊಂದರಲ್ಲೇ ಮಾಲಿವುಡ್ ಇಂಡಸ್ಟ್ರಿಯಲ್ಲಿ 15 ಸಿನಿಮಾಗಳು ರಿಲೀಸ್ ಆಗಿದೆ. ಈ ಪೈಕಿ ಬಾಕ್ಸಾಫೀಸ್‌ನಲ್ಲಿ ಲಾಭ ತಂದುಕೊಟ್ಟದ್ದು ಕೇವಲ ಒಂದು ಒಂದು ಸಿನಿಮಾ.!
ಮಾರ್ಚ್ 27 ರಂದು ಅಂದರೆ ಈದ್ ಹಬ್ಬದ ಸಂದರ್ಭದಲ್ಲಿ ಮಾಲಿವುಡ್‌ನಲ್ಲಿ ಬಹು ನಿರೀಕ್ಷಿತ, ಮೋಹನ್ ಲಾಲ್ (Mohanlal) ಅವರ ‘L2: ಎಂಪುರಾನ್’ (Empuraan) ರಿಲೀಸ್ ಆಗಿತ್ತು.

ಪೃಥ್ವಿರಾಜ್ ಸುಕುಮಾರನ್ ನಿರ್ದೇಶನದ ರಾಜಕೀಯ ಕಥಾಹಂದರ ʼಎಂಪುರಾನ್ʼ 175 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿತ್ತು.
ಭಾರತದಲ್ಲಿ 142.25 ಕೋಟಿ ರೂಪಾಯಿ ಗಳಿಸಿದ್ರೆ, ವರ್ಲ್ಡ್ ವೈಡ್ 265.5 ಕೋಟಿ ರೂಪಾಯಿಯನ್ನು ಗಳಿಸಿದೆ. ಮಾರ್ಚ್ ತಿಂಗಳ ಕೊನೆಯಲ್ಲಿ ಚಿತ್ರ ರಿಲೀಸ್ ಆಗಿತ್ತು. ರಿಲೀಸ್ ಆದ 5 ದಿನದಲ್ಲಿ 24 ಕೋಟಿ ರೂಪಾಯಿ ಗಳಿಸಿತು.
ಮಾರ್ಚ್‌ನಲ್ಲಿ ರಿಲೀಸ್ ಆದ 15 ಸಿನಿಮಾಗಳ ಪೈಕಿ ʼಎಂಪುರಾನ್ʼ ಚಿತ್ರ ಅತೀ ಹೆಚ್ಚು ಕಲೆಕ್ಷನ್ ಮಾಡಿದೆ ಎಂದು ಕೇರಳ ಚಲನಚಿತ್ರ ನಿರ್ಮಾಪಕರ ಸಂಘ ಹೇಳಿದೆ.
ಉಳಿದ ಸಿನಿಮಾಗಳ ಕಥೆ ಏನು?:
ʼಎಂಪುರಾನ್ʼ ಮಾತ್ರವಲ್ಲದೆ ಮಾರ್ಚ್ ತಿಂಗಳಿನಲ್ಲಿ 'ಪರಿವಾರ್ʼ, 'ಮರುವಶಂ', `ಪ್ರಳಯಶೇಷೋಂ ಒರು ಜಲಕನ್ಯಕ್ಕ', `ಆರಣ್ಯಂ', `ಕಾಡಕಂ`, `ಲೀಚ್`, `ವೇಟಿಂಗ್ ಲಿಸ್ಟ್` , ʼ ವಡಕ್ಕನ್ʼ ನಂತಹ ಸಿನಿಮಾಗಳು ರಿಲೀಸ್ ಆಗಿದೆ. ಆದರೆ ಬಾಕ್ಸಾಫೀಸ್‌ನಲ್ಲಿ ಈ ಚಿತ್ರಗಳ ಗಳಿಕೆ ಹೇಳಿಕೊಳ್ಳುವಷ್ಟರ ಮಟ್ಟಿಗೆ ಆಗಿಲ್ಲ.

ಮಾರ್ಚ್‌ನಲ್ಲಿ ಬಿಡುಗಡೆಯಾದ 15 ಚಿತ್ರಗಳ ಬಜೆಟ್ ಮತ್ತು ಕಲೆಕ್ಷನ್‌ಗಳನ್ನು ಕೇರಳ ಚಲನಚಿತ್ರ ನಿರ್ಮಾಪಕರ ಸಂಘ ಬಿಡುಗಡೆ ಮಾಡಿದ್ದು, ಈ ಚಿತ್ರಗಳ ಒಟ್ಟು ಹೂಡಿಕೆ 194 ಕೋಟಿ ರೂ.ಗಳಿಗಿಂತ ಹೆಚ್ಚಿದೆ. ಆದರೆ ನಿರ್ಮಾಪಕರಿಗೆ ಹಿಂತಿರುಗಿದ ಒಟ್ಟು ಥಿಯೇಟರ್ ಪಾಲು ಕೇವಲ 25.88 ಕೋಟಿ ರೂ ಮಾತ್ರ ಆಗಿದೆ.

2.70 ಕೋಟಿ ರೂಪಾಯಿ ಬಜೆಟ್‌ನಲ್ಲಿ ಬಂದ ʼಪರಿವಾರ್ʼ ಗಳಿಸಿದ್ದು ಕೇವಲ 26 ಲಕ್ಷವನ್ನಷ್ಟೇ. 3.65 ಕೋಟಿ ರೂಪಾಯಿಯಲ್ಲಿ ಬಂದ ʼ ವಡಕ್ಕನ್ʼ ಚಿತ್ರ 20 ಲಕ್ಷ ರೂಪಾಯಿಯನ್ನು ಗಳಿಸಿತು. 'ದಾಸೆಟ್ಟಾಂಟೆ ಸೈಕಲ್ʼ ಎನ್ನುವ ಚಿತ್ರ 70 ಲಕ್ಷ ಬಜೆಟ್‌ನಲ್ಲಿ ತೆರೆ ಕಂಡಿತು. ಆದರೆ ಬಾಕ್ಸಾಫೀಸ್ ಕೇವಲ 8 ಕೋಟಿ ರೂಪಾಯಿಯನ್ನಷ್ಟೇ ಗಳಿಸಿತು.
ಮಾರ್ಚ್‌ನಲ್ಲಿ ರಿಲೀಸ್ ಆದ ಸಿನಿಮಾಗಳ ಪೈಕಿ 5 ಸಿನಿಮಾಗಳು ಇನ್ನು ಥಿಯೇಟರ್‌ನಲ್ಲಿ ಪ್ರದರ್ಶನ ಕಾಣುತ್ತಿದೆ. ʼಎಂಪುರಾನ್ʼ, ʼಅಭಿಲಾಶಂ', 'ವಡಕ್ಕನ್', 'ಪರಿವಾರ್', ʼಔಸೆಪ್ಪಿಂಟೆ ಒಸಿಯಾತುʼ ಸಿನಿಮಾಗಳು ಥಿಯೇಟರ್‌ನಲ್ಲಿ ಪ್ರದರ್ಶನ ಕಾಣುತ್ತಿದೆ. ಇದರಲ್ಲಿ ಅಭಿಲಾಶಂ ರಿಲೀಸ್ ಆದ ಮೂರೇ ದಿನಕ್ಕೆ 15 ಲಕ್ಷ ರೂ. ಗಳಿಸಿದೆ ಎಂದು ವರದಿ ತಿಳಿಸಿದೆ.
ಕೇರಳದ ಥಿಯೇಟರ್ ಪಾಲನ್ನು ಮಾತ್ರ ಈ ಪಟ್ಟಿ ಒಳಗೊಂಡಿದ್ದು, ಓಟಿಟಿ ಮತ್ತು ಸ್ಯಾಟ್ ಲೈಟ್ ಹಕ್ಕುಗಳ ಲೆಕ್ಕ ಇದರಲ್ಲಿ ಇಲ್ಲ.




