ನವದೆಹಲಿ: ಯುದ್ಧನೌಕೆಯಿಂದ ಹಡಗು ನಿರೋಧಕ ಕ್ಷಿಪಣಿಯನ್ನು ಭಾರತೀಯ ನೌಕಾಪಡೆ ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ಅಧಿಕಾರಿಗಳು ಇಂದು (ಭಾನುವಾರ) ತಿಳಿಸಿದ್ದಾರೆ.
ಈ ಕುರಿತು ಭಾರತೀಯ ನೌಕಾಪಡೆ ವಿಡಿಯೊ ಹಾಗೂ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ.
ದೀರ್ಘ ವ್ಯಾಪ್ತಿಯ ನಿಖರ ಗುರಿಯನ್ನು ಸಾಧಿಸಲು, ಸನ್ನದ್ಧತೆ, ವ್ಯವಸ್ಥೆ ಹಾಗೂ ಸಾಮರ್ಥ್ಯ ಖಚಿತಪಡಿಸಿಕೊಳ್ಳಲು ಈ ಪರೀಕ್ಷೆ ನಡೆಸಲಾಗಿದೆ ಎಂದು ಅದು ಹೇಳಿದೆ
ಭಾರತೀಯ ನೌಕಾಪಡೆಯು ಯಾವುದೇ ಸಮಯವಾದರೂ, ಎಲ್ಲಿಯೇ ಆದರೂ ದೇಶದ ಸಾಗರ ಹಿತಾಸಕ್ತಿಯನ್ನು ಕಾಪಾಡಲು ಸದಾ ಸನ್ನದ್ಧವಾಗಿದೆ ಎಂದು ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಬೆನ್ನಲ್ಲೇ ನೌಕಾಪಡೆಯು ಸರಣಿ ಸಮರಾಭ್ಯಾಸದಲ್ಲಿ ಭಾಗಿಯಾಗಿವೆ.




