ಮಾಸ್ಕೊ: ಮೇ 9ರಂದು ನಡೆಯಲಿರುವ 80ನೇ 'ವಿಜಯೋತ್ಸವ ಪಥಸಂಚಲನ'ದಲ್ಲಿ ಪಾಲ್ಗೊಳ್ಳುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ರಷ್ಯಾ ಉಪ ವಿದೇಶಾಂಗ ಸಚಿವ ಆಯಂಡ್ರೆ ರುಡೆಂಕೊ ಅವರು ತಿಳಿಸಿದ್ದಾರೆ.
ಎರಡನೇ ವಿಶ್ವಯುದ್ಧದಲ್ಲಿ ಜರ್ಮನಿಯನ್ನು ಸೋಲಿಸಿದ ನೆನಪಿಗಾಗಿ ಪ್ರತಿ ವರ್ಷ ಮೇ 9ರಂದು ವಿಜಯೋತ್ಸವ ಪಥಸಂಚಲನ ಆಯೋಜಿಸಲಾಗುತ್ತದೆ.




