ಶತಮಾನದ ಪರಂಪರೆಯನ್ನು ಹೊಂದಿರುವ ಬಿಬಿಸಿಯ ಎಲ್ಲಾ ಚಾನೆಲ್‍ಗಳನ್ನು ಸ್ಥಗಿತಗೊಳಿಸುವುದಾಗಿ ತಂಡದ ನಾಯಕರು ಘೋಷಿಸಿದ್ದಾರೆ. 2030 ರ ವೇಳೆಗೆ ಬಿಬಿಸಿಯ ಎಲ್ಲಾ ಚಾನೆಲ್‍ಗಳು ಪ್ರಸಾರವನ್ನು ನಿಲ್ಲಿಸಿ ಆನ್‍ಲೈನ್‍ಗೆ ಮಾತ್ರ ಸೀಮಿತವಾಗುತ್ತವೆ ಎಂದು ಬಿಬಿಸಿ ಮಹಾನಿರ್ದೇಶಕ ಟಿಮ್ ಡೇವಿ ಅಧಿಕೃತವಾಗಿ ತಿಳಿಸಿದ್ದಾರೆ.
ಬಿಬಿಸಿ ಬಾಸ್ ಟಿಮ್ ಡೇವಿ ಕಂಪನಿಯು ತನ್ನ ಕಾರ್ಯಾಚರಣೆಯನ್ನು ಇಂಟರ್ನೆಟ್‍ಗೆ ಮಾತ್ರ ವರ್ಗಾಯಿಸುತ್ತದೆ ಮತ್ತು ಸಾಂಪ್ರದಾಯಿಕ ಪ್ರಸಾರ ವ್ಯವಸ್ಥೆಗಳನ್ನು ತೆಗೆದುಹಾಕುತ್ತದೆ ಎಂದು ದೃಢಪಡಿಸಿದ್ದಾರೆ. ಜನವರಿ 8, 2024 ರಿಂದ, ಬಿಬಿಸಿ ಉಪಗ್ರಹಗಳಲ್ಲಿನ ಸ್ಟ್ಯಾಂಡರ್ಡ್ ಡೆಫಿನಿಷನ್ (ಎಸ್.ಡಿ.) ಉಪಗ್ರಹ ಪ್ರಸಾರಗಳಿಂದ ಹೈ ಡೆಫಿನಿಷನ್ (ಎಚ್.ಡಿ) ಆವೃತ್ತಿಗಳಿಗೆ ಬದಲಾಯಿತು. ಇದರ ನಂತರ ಹೊಸ ಘೋಷಣೆ ಹೊರಬಿದ್ದಿದೆ. ಖ್ಯಾತಿ ಮತ್ತು ಉದ್ಯೋಗಿಗಳ ಸಂಖ್ಯೆಯ ವಿಷಯದಲ್ಲಿ ಬಿಬಿಸಿ ಮಾಧ್ಯಮ ಉದ್ಯಮದಲ್ಲಿ ಮುಂಚೂಣಿಯಲ್ಲಿದೆ. ಬಿಬಿಸಿಯಲ್ಲಿ 21,000 ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಾರೆಂದು ಅಂದಾಜಿಸಲಾಗಿದೆ. 1922 ರಲ್ಲಿ ರಚನೆಯಾದಾಗಿನಿಂದ, ಬಿಬಿಸಿ ಬ್ರಿಟಿಷ್ ಜನರ ಜೀವನ ಮತ್ತು ಸಂಸ್ಕøತಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ.





