ಬದಿಯಡ್ಕ: ಕೇರಳ ಸರ್ಕಾರದ 2024-25ನೇ ಶೈಕ್ಷಣಿಕ ವರ್ಷದಲ್ಲಿ 7ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಿದ ಯುಎಸ್‍ಎಸ್ ಪರೀಕ್ಷೆಯಲ್ಲಿ ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಸ್ಕೂಲ್‍ನ ವಿದ್ಯಾರ್ಥಿಗಳಾದ ಸಮನ್ವಿತ ಎಂ, ರಾಧಾಮಾಧವ ಶರ್ಮಾ ಬಿ, ಹೃದ್ಯ, ಶಿವ ತೇಜಸ್ ಎ, ಯಶ್ವಿತ ಜಿ ರೈ, ನವ್ಯಶ್ರೀ, ಪ್ರಜ್ವಲ್ ಎ, ಹಿತೇಶ್ ಪಿ, ಯಶ್ಮಿತ, ಸಾನ್ವಿ ಶರ್ಮಾ ಪಿ ಸ್ಕಾಲರ್‍ಶಿಪ್‍ಗೆ ಅರ್ಹತೆ ಪಡೆದಿರುತ್ತಾರೆ. ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು ಹಾಗೂ ಅಧ್ಯಾಪಕ ವೃಂದ, ರಕ್ಷಕ ಶಿಕ್ಷಕ ಸಂಘ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆಯನ್ನು ಸಲ್ಲಿಸಿದೆ.






