ಇಸ್ಲಮಾಬಾದ್: ಪಾಪಿ ಪಾಕಿಸ್ತಾನದ ಮತ್ತೊಂದು ಕರಾಳ ಮುಖ ಬಯಲಾಗಿದೆ. ಉಗ್ರ ಮಸೂದ್ ಅಜರ್ ಗೆ ಪಾಕಿಸ್ತಾನದಿಂದ 14 ಕೋಟಿ ಪರಿಹಾರವನ್ನು ಘೋಷಣೆ ಮಾಡಲಾಗಿದೆ.
ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಉಗ್ರ ಮಸೂದ್ ಅಜರ್ ಹತ್ಯೆ ಮಾಡಲಾಗಿತ್ತು. ಹೀಗೆ ಹತ್ಯೆಯಾದಂತ ಉಗ್ರ ಮಸೂದ್ ಅಜರ್ ಗೆ ಪಾಕಿಸ್ತಾನವು 14 ಕೋಟಿ ಪರಿಹಾರವನ್ನು ಘೋಷಿಸಿದೆ.
ಅಂದಹಾಗೇ ಮಸೂದ್, ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಸಂಸ್ಥಾಪಕನಾಗಿದ್ದನು. ಭಾರತದ ದಾಳಿಯಲ್ಲಿ ಉಗ್ರ ಮಸೂದ್ ಸೇರಿದಂತೆ ಕುಟುಂಬದ 14 ಜನರು ಬಲಿಯಾಗಿದ್ದರು. ಹೀಗೆ ಹತ್ಯೆಯಾದಂತ ಉಗ್ರರ ಕುಟುಂಗಳಿಗೆ ತಲಾ 1 ಕೋಟಿ ಪರಿಹಾರವನ್ನು ಪಾಕಿಸ್ತಾನ ಸರ್ಕಾರ ಘೋಷಿಸಿದೆ. ಅಲ್ಲದೇ ಮಸೂದ್ ಅಜರ್ ಮನೆ ಮರು ನಿರ್ಮಾಣ ಮಾಡಲಾಗುತ್ತಿದೆ.




