ಅಲಪ್ಪುಳ: ಸಾಕು ನಾಯಿಯ ಉಗುರುಗಳಿಂದ ಗೀರಲ್ಪಟ್ಟು ಚಿಕಿತ್ಸೆಯಲ್ಲಿದ್ದ 17 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ತಕಾಜಿ ದೇವಸ್ವಂ ಬೋರ್ಡ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ಟು ವಿದ್ಯಾರ್ಥಿ ಸೂರಜ್ ಮೃತಪಟ್ಟ ದುರ್ದೈವಿ. ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿರುವನು.
ಸಂಬಂಧಿಕರ ಮನೆಯಲ್ಲಿ ಸಾಕು ನಾಯಿ ಕಚ್ಚಿದ್ದರಿಂದ ವಿದ್ಯಾರ್ಥಿ ಗಾಯಗೊಂಡಿದ್ದ. ನಾಯಿಯ ಉಗುರುಗಳಿಂದ ಗೀರಲ್ಪಟ್ಟ ಬಳಿಕ ಸೂರಜ್ ಕೆಲವು ದಿನಗಳಿಂದ ದೈಹಿಕ ಅಸ್ವಸ್ಥತೆಯನ್ನು ಅನುಭವಿಸುತ್ತಿದ್ದ. ನಂತರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ರೇಬೀಸ್ ಲಸಿಕೆಗಳು ಲಭಿಸಿರಲಿಲ್ಲ. ಮರಣೋತ್ತರ ಪರೀಕ್ಷೆಯ ನಂತರವೇ ವಿವರಗಳು ತಿಳಿಯಲಿವೆ.




.webp)
