ತಿರುವನಂತಪುರಂ: ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಸಚಿವಾಲಯದಲ್ಲಿ ನಿಯಂತ್ರಣ ಕೊಠಡಿಯನ್ನು ತೆರೆದಿದೆ.
ಗಡಿ ರಾಜ್ಯಗಳಲ್ಲಿರುವ ಕೇರಳಿಗರು ಮತ್ತು ಮಲಯಾಳಿ ವಿದ್ಯಾರ್ಥಿಗಳಿಗೆ ನೆರವು ಮತ್ತು ಮಾಹಿತಿ ಒದಗಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸೂಚನೆಯ ಮೇರೆಗೆ ಸಚಿವಾಲಯ ಮತ್ತು ನೋರ್ಕಾದಲ್ಲಿ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ.
ಪ್ರಸ್ತುತ ಚಿಂತಿಸುವ ಅಗತ್ಯವಿಲ್ಲ ಮತ್ತು ಅಧಿಕಾರಿಗಳು ನೀಡಿದ ಸೂಚನೆಗಳನ್ನು ಪಾಲಿಸುವುದು ಮತ್ತು ಸುರಕ್ಷಿತವಾಗಿರುವುದು ಉತ್ತಮ ಎಂದು ಸರ್ಕಾರ ನಿರ್ದೇಶಿಸಿದೆ. ಸಹಾಯ ಬೇಕಿದ್ದವರು ನಿಯಂತ್ರಣ ಕೊಠಡಿ ಸಂಖ್ಯೆಯನ್ನು ಸಂಪರ್ಕಿಸಬಹುದು.
ಸಚಿವಾಲಯದ ನಿಯಂತ್ರಣ ಕೊಠಡಿ: 0471-2517500/2517600. ಫ್ಯಾಕ್ಸ್: 0471 -2322600. ಇಮೇಲ್:
ನೋರ್ಕಾ ಗ್ಲೋಬಲ್ ಸಂಪರ್ಕ ಕೇಂದ್ರ: 18004253939 (ಟೋಲ್ ಫ್ರೀ ಸಂಖ್ಯೆ),
00918802012345 (ವಿದೇಶದಿಂದ ಮಿಸ್ಡ್ ಕಾಲ್)




.webp)
.webp)
