ತಿರುವನಂತಪುರಂ: ಕಾಟ್ಟಾಕಡ ಆದಿಶೇಖರ್ ಕೊಲೆ ಪ್ರಕರಣದ ಆರೋಪಿ ಪ್ರಿಯಾ ರಂಜನ್ ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 10 ಲಕ್ಷ ರೂ. ದಂಡ ವಿಧಿಸಿದೆ.
ದೇವಸ್ಥಾನದ ಗೋಡೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪೂವಾಚಲದ 10 ನೇ ತರಗತಿ ವಿದ್ಯಾರ್ಥಿ ಆದಿಶೇಖರ್ ಎಂಬಾತನನ್ನು ಕಾರು ಡಿಕ್ಕಿ ಹೊಡೆದು ಕೊಂದ ಪ್ರಕರಣದಲ್ಲಿ ಈ ತೀರ್ಪು ನೀಡಲಾಗಿದೆ. ತಿರುವನಂತಪುರಂ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಆರೋಪಿಯನ್ನು ತಪ್ಪಿತಸ್ಥ ಎಂದು ಪರಿಗಣಿಸಿ ಶಿಕ್ಷೆ ವಿಧಿಸಿದೆ.
ಈ ಘಟನೆ 2023 ರಲ್ಲಿ ನಡೆದಿತ್ತು. ಆದಿಶೇಖರ್ ಸೈಕಲ್ ಸವಾರಿ ಮಾಡುತ್ತಿದ್ದಾಗ, ಆರೋಪಿ ಪ್ರಿಯರಂಜನ್ ಕಾರಿನಲ್ಲಿ ಅವರ ಹಿಂದೆ ಬಂದು ಮಗುವಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದ. ಅವನು ಉದ್ದೇಶಪೂರ್ವಕವಾಗಿ ತನ್ನ ವಾಹನವನ್ನು ದೇಹದ ಮೇಲೆ ಚಲಾಯಿಸಿ ಮಗುವನ್ನು ಕೊಲೆಗೈದಿದ್ದ. ಪ್ರಿಯರಂಜನ್ ಕೊಲೆಯಾದ ಮಗುವಿನ ಸಂಬಂಧಿ. ಸಿಸಿಟಿವಿ ದೃಶ್ಯಗಳಲ್ಲಿ ಆರೋಪಿ ಮಾಡಿದ್ದ ಹುನ್ನಾರಗಳು ಸೆರೆಯಾಗಿ ಪ್ರಬಲ ಸಾಕ್ಷಿಯೊದಗಿಸಿತ್ತು.





