ಬದಿಯಡ್ಕ: ಕೇರಳ ಸರ್ಕಾರದ ಮೃಗಸಂರಕ್ಷಣಾ ಇಲಾಖೆಯ ಬೇಳ ಗೋಶಾಲೆಯ ನೂತನ ಕಟ್ಟಡದ ಉದ್ಘಾಟನೆ ಮೇ.19ರಂದು ಸಂಜೆ 4 ಕ್ಕೆ ಜರಗಲಿದೆ. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆಯಲ್ಲಿ ಮೃಗಸಂರಕ್ಷಣೆ-ಮೃಗಾಲಯ-ಡೈರಿ ಅಭಿವೃದ್ಧಿ ಇಲಾಖೆಯ ಸಚಿವೆ ಜೆ.ಚಿಂಜುರಾಣಿ ಉದ್ಘಾಟಿಸಲಿದ್ದಾರೆ. ಬದಿಯಡ್ಕ ಗ್ರಾಮಪಂಚಾಯಿತಿ ಅಧ್ಯಕ್ಷೆ ಬಿ.ಶಾಂತಾ, ಜಿಲ್ಲಾಪಂಚಾಯಿತಿ ಸದಸ್ಯೆ ಶೈಲಜಾ ಎನ್.ಭಟ್, ಜನಪ್ರತಿನಿಧಿಗಳು, ಇಲಾಖೆಯ ಅಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾಸರಗೋಡು ಗಿಡ್ಡ ತಳಿಯ ಗೋಶಾಲೆ :
ಅಳಿದು ಹೋಗುವ ಸ್ಥಿತಿಯಲ್ಲಿದ್ದ ಕಾಸರಗೋಡು, ಗಿಡ್ಡ ತಳಿಗಳನ್ನು ಸಂರಕ್ಷಿಸುವುದಕ್ಕಾಗಿ ಬದಿಯಡ್ಕ ಗ್ರಾಮ ಪಂಚಾಯಿತಿ ವತಿಯಿಂದ ಉಚಿತವಾಗಿ ನೀಡಲಾದ 5.5 ಏಕರೆ ಸ್ಥಳದಲ್ಲಿ 2015ರಲ್ಲಿ 30 ಹಸುಗಳೊಂದಿಗೆ ಆರಂಭಿಸಿದ ಬೇಳ ಜಾನುವಾರು ಸಂರಕ್ಷಣಾ ಕೇಂದ್ರದಲ್ಲಿ ಇದೀಗ ಸುಮಾರು 150 ರಷ್ಟು ದನ ಮತ್ತು ಹೋರಿಗಳನ್ನು ಹೊಂದಿದೆ. ಸರ್ಕಾರದ ಏಕೈಕ ಗೋಸಂರಕ್ಷಣಾ ಕೇಂದ್ರವು ಬೇಳದಲ್ಲಿರುವುದು ಜಿಲ್ಲೆಗೇ ಹೆಮ್ಮೆ ತಂದಿದೆ. ಕ್ಯಾಟಲ್ ಫಾರ್ಮ್ ಅತ್ಯುತ್ತಮ ಕಾರ್ಯಕ್ಷಮತೆಯೊಂದಿಗೆ ಲಾಭದಾಯಕವಾಗಿದೆ. ಮನುಷ್ಯನ ಶರೀರಕ್ಕೆ ಅಗತ್ಯವಾದ ಶುದ್ಧವಾದ ಎ2 ಹಾಲನ್ನು ನೀಡುವ ಕಾಸರಗೋಡು ಗಿಡ್ಡ ತಳಿಯ ಹಸುವಿನ ಹಾಲಿಗೆ ರೋಗನಿರೋಧಕ ಅತಿಹೆಚ್ಚು ಇದೆ. ಆದುದರಿಂದ ಈ ಹಸುಗಳಿಗೆ ಅತೀವ ಬೇಡಿಕೆಯಿದೆ. ಪ್ರಸ್ತುತ, ಫಾರ್ಮ್‍ನಲ್ಲಿ ದಿನಕ್ಕೆ 50 ಲೀಟರ್ ಹಾಲು ಮಾರಾಟವಾಗುತ್ತಿದೆ. ದನಕರುಗಳನ್ನು ಸಾಕಣೆಗೆ ಅಗತ್ಯವಿರುವವರಿಗೆ ನೀಡಲಾಗುತ್ತದೆ. ಫಾರಂನ ಅಭಿವೃದ್ಧಿಗಾಗಿ ಮೃಗ ಸಂರಕ್ಷಣಾ ಇಲಾಖೆ ವಾರ್ಷಿಕ ಯೋಜನೆಯಲ್ಲಿ ಸೇರಿಸಿ, 90 ಲಕ್ಷ ರೂಪಾಯಿ ಜ್ಯಾರಿಗೊಳಿಸಿ ಲೋಕೋಪಯೋಗಿ ಇಲಾಖೆಯು ಕಟ್ಟಡದ ಉಸ್ತುವಾರಿಯನ್ನು ವಹಿಸಿ ಕಟ್ಟಡವು ನಿರ್ಮಾಣಗೊಂಡಿದೆ.




.jpg)
.jpg)
