HEALTH TIPS

ವಿವಾಹ, ಮನೆ ದುರಸ್ಥಿ, ವೈದ್ಯಕೀಯ ಚಿಕಿತ್ಸೆಗೆ ಸಾಯಿರಾಂ ಕೃಷ್ಣ ಭಟ್ ನೆರವು-5 ಮಂದಿ ಯುವತಿಯರಿಗೆ ಹೊಲಿಗೆ ಯಂತ್ರ ವಿತರಣೆ

ಬದಿಯಡ್ಕ: ಕೊಡುಗೈದಾನಿ ಕಿಳಿಂಗಾರು ಸಾಯಿರಾಂ ಕೆ.ಎನ್.ಕೃಷ್ಣ ಭಟ್ ಅವರು ಬಡಜನತೆಗೆ ಉಚಿತವಾಗಿ ಕೊಡಮಾಡುವ ವಿವಿಧ ಸೌಲಭ್ಯಗಳ ವಿತರಣೆ ಶುಕ್ರವಾರ ಕಿಳಿಂಗಾರು ಸಾಯಿನಿಲಯದಲ್ಲಿ ಜರಗಿತು. 

ಸಾಯಿರಾಂ ಗೋಪಾಲಕೃಷ್ಣ ಭಟ್ಟರ ನಂತರ ಅವರ ಪುತ್ರ ಕೆ.ಎನ್.ಕೃಷ್ಣ ಭಟ್ ಹಾಗೂ ಕುಟುಂಬವು ಬಡಜನತೆಯ ಆಶಾಕಿರಣವಾಗಿ ಮುಂದುವರಿಯುತ್ತಿರುವುದರ ಭಾಗವಾಗಿ ಮದುವೆಗೆ ಧನಸಹಾಯ, ಮನೆ ದುರಸ್ಥಿ, ಹೊಲಿಗೆ ಯಂತ್ರ ವಿತರಣೆ ಮೊದಲಾದ ಸೇವಾಕಾರ್ಯಗಳು ನಡೆಯುತ್ತಿದೆ. ಒಂದು ಕಾಲಿಗೆ ಬಲವಿಲ್ಲದ ಅಮ್ಮು ಮುಕಾರಿಗದ್ದೆ ಎಂಬವರ ಮಗಳ ವಿವಾಹಕ್ಕೆ 20000 ರೂಪಾಯಿಯನ್ನು ಕುಲಪುರೋಹಿತರಾದ ವೇದಮೂರ್ತಿ ಮಹಾಲಿಂಗೇಶ್ವರ ಉಪಾದ್ಯಾಯ ಅವರು ಹಸ್ತಾಂತರಿಸಿದರು. ಪೆರ್ಲದ ಕಿಶನ್ ಕುಮಾರ್ ಎಂಬವರಿಗೆ ಮನೆ ದುರಸ್ಥಿಗೆ 20000 ರೂ, ಆಟೋಚಾಲಕ ಚಂದ್ರಗೋಪಾಲ ಕಾಕುಂಜೆ ಎಂಬವರ ಪತ್ನಿ ಲತಾ ಕುಮಾರಿ ಇವರಿಗೆ ವೈದ್ಯಕೀಯ ಸಹಾಯವಾಗಿ ರೂ.20000 ಹಾಗೂ ರೋಶಿನಿ ಕೆ.ಎಂ.ನೀರ್ಚಾಲು, ಕುಮುದಾ ನಾಯ್ಕಾಪು, ಆಯಿಶತ್ ಸಜನಾ ಬಿರ್ಮಿನಡ್ಕ, ಹೇಮಲತಾ ಕಟ್ಟತ್ತಂಗಡಿ ಮತ್ತು ಪಲ್ಲವಿ ಎನ್.ಕೆ.ನಲ್ಕ ಇವರಿಗೆ ಹೊಲಿಗೆ ಯಂತ್ರಕ್ಕಾಗಿ ಧನಸಹಾಯ ಹಸ್ತಾಂತರಿಸಲಾಯಿತು. 

ಸಾಯಿರಾಂ ಕೆ.ಎನ್.ಕೃಷ್ಣ ಭಟ್ ಹಾಗೂ ಪುತ್ರ ವೇಣುಗೋಪಾಲ ಕೆ.ಎನ್. ಅವರ ನೇತೃತ್ವದಲ್ಲಿ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಎಂ., ಉದನೇಶ್ವರ ಭಟ್ ಅಳಕ್ಕೆ,  ಸುಬ್ಬಣ್ಣ ಭಟ್, ಮಹೇಶ್ ಪಿ., ಶಾಂತಿ, ಸಂದೇಶ್, ಶಿವಕುಮಾರ್, ರವಿ ಮದನಗುಳಿ, ಸಂಜೀವ ರೈ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



ತಂದೆಯವರು ನಡೆಸಿಕೊಂಡು ಬರುತ್ತಿದ್ದ ಸೇವಾಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗಬೇಕು, ಬಡಜನತೆಗೆ ನೆರವಾಗಬೇಕು ಎಂಬ ಚಿಂತೆ ಸದಾ ಮನದಲ್ಲಿರುತ್ತದೆ. ಈ ನಿಟ್ಟಿನಲ್ಲಿ ನಮ್ಮ ಮನೆಯಲ್ಲಿ ನಡೆದ ವೆ`ದಿಕ ಕಾರ್ಯಕ್ರಮದ ಈ ಶು`Àದಿನದಂದು ಈ ಕಾರ್ಯವನ್ನು ಕೆ`ಗೊಂಡಿದ್ದೇವೆ.

 - ಸಾಯಿರಾಂ ಕೆ.ಎನ್.ಕೃಷ್ಣ ಭಟ್, ಕಿಳಿಂಗಾರು


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries