ನಾಳೆ ಎಂದರೆ ಜೂನ್ 1ರಿಂದ ಕೆಲವು ಐಫೋನ್‌ಗಳು ಮತ್ತು ಆಯಂಡ್ರಾಯ್ಡ್ ವರ್ಶನ್ನ ಸ್ಮಾರ್ಟ್ಫೋನ್ಗಳಲ್ಲಿ ವಾಟ್ಸ್ಆಯಪ್ ಕಾರ್ಯನಿರ್ವಹಿಸುವುದಿಲ್ಲ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ. ಅಷ್ಟಕ್ಕೂ ಈ ಪಟ್ಟಿಯಲ್ಲಿ ನಿಮ್ಮ ಫೋನ್ ಕೂಡ ಇದೆಯೇ ಎಂಬುದನ್ನು ಮೊದಲು ಪರಿಶೀಲಿಸಿ.
ಅಕಸ್ಮಾತ್ ಇದ್ದಲ್ಲಿ, ಶೀಘ್ರವೇ ಬದಲಾವಣೆ ಮಾಡಿಕೊಳ್ಳಿ. ಇಲ್ಲದಿದ್ರೆ, ಜೂನ್ 01ರ ನಂತರ ವಾಟ್ಸ್ಆಯಪ್ ಉಪಯೋಗಿಸಲು ಸಾಧ್ಯವಿಲ್ಲ.
ಅಧಿಕ ಸಂಖ್ಯೆಯಲ್ಲಿ ಹಳೆಯ ಐಫೋನ್‌ಗಳು ಮತ್ತು ಆಯಂಡ್ರಾಯ್ಡ್ ಫೋನ್‌ಗಳಲ್ಲಿ ಇತ್ತೀಚಿನ ಅಪ್ಡೇಟ್ ವರ್ಶನ್ ವಾಟ್ಸ್ಆಯಪ್ ಕಾರ್ಯನಿರ್ವಹಿಸುವುದಿಲ್ಲ ಎಂದು ಮೆಟಾ ಸಂಸ್ಥೆ ತಿಳಿಸಿದೆ. ಹೊಸ ಅಪ್‌ಡೇಟ್‌ನ ವಾಟ್ಸ್ಆಯಪ್ ಬೆಂಬಲಿಸದ ಹಳೆಯ ಮಾದರಿಯ ಫೋನ್ಗಳ ಪಟ್ಟಿಯನ್ನು ಇದೀಗ ಬಿಡುಗಡೆಗೊಳಿಸಲಾಗಿದೆ. ಯಾವೆಲ್ಲ ಫೋನ್ಗಳು ಈ ಪಟ್ಟಿಯಲ್ಲಿವೆ? ಎಂಬ ಮಾಹಿತಿ ಈ ಕೆಳಕಂಡಂತಿದೆ ಗಮನಿಸಿ.
ಮ್ಯಾಕ್ ವರ್ಶನ್ (ಐಫೋನ್)
1. ಐಫೋನ್ 5s,
2. ಐಫೋನ್ 6,
3. ಐಫೋನ್ 6 ಪ್ಲಸ್,
4. ಐಫೋನ್ 6s,
5. ಐಫೋನ್ 6s ಪ್ಲಸ್
6. ಐಫೋನ್ SE
ಆಯಂಡ್ರಾಯ್ಡ್ ಫೋನ್ಗಳು
1. ಸ್ಯಾಮ್ಸಂಗ್ ಗ್ಯಾಲಕ್ಸಿ S4
2. ಸ್ಯಾಮ್ಸಂಗ್ ಗ್ಯಾಲಕ್ಸಿ ನೋಟ್ 3
3. ಸೋನಿ ಎಕ್ಪಿರಿಯಾ ಜೆ1
4. ಎಲ್ಜಿ ಜಿ2
5. ಹುವಾಯಿ ಅಸೆಂಡ್ ಪಿ6
6. ಮೊಟೋ ಜಿ ಮೊದಲ ಜನರೇಷನ್
7. ಮೊಟೊರೊಲಾ ರೇಜರ್ ಎಚ್ಡಿ
8. ಮೊಟೊ ಇ (2014)




