HEALTH TIPS

2026ಕ್ಕೆ ನಕ್ಸಲಿಸಂ ಮುಕ್ತ ಭಾರತ: ಭದ್ರತಾ ಪಡೆಗಳ ಕಾರ್ಯಾಚರಣೆ ತೀವ್ರ; CRPF ಡಿಜಿ

ಬಿಜಾಪುರ: ದೇಶದಲ್ಲಿ ನಕ್ಸಲಿಸಂ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಭದ್ರತಾ ಪಡೆಗಳು ನಿರಂತರವಾಗಿ ದಿಟ್ಟ ಕಾರ್ಯಾಚರಣೆಯನ್ನು ನಡೆಸುತ್ತಿವೆ ಎಂದು ಕೇಂದ್ರ ಮೀಸಲು ಪೊಲೀಸ್ ಪಡೆಯ ಮಹಾನಿರ್ದೇಶಕ ಜಿ.ಪಿ ಸಿಂಗ್ ಬುಧವಾರ ಹೇಳಿದ್ದಾರೆ.

2014ರಿಂದ ಪ್ರಾರಂಭಿಸಲಾದ ನಕ್ಸಲ್‌ ವಿರೋಧಿ ಕಾರ್ಯಾಚರಣೆಯನ್ನು 2019ರಿಂದ ತೀವ್ರಗೊಳಿಸಲಾಗಿದೆ.

ನಕ್ಸಲರನ್ನು ಹತ್ತಿಕ್ಕುವ ಬದ್ದತೆಯೊಂದಿಗೆ ಪೊಲೀಸರ ಜತೆಗೂಡಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಸಿಂಗ್ ತಿಳಿಸಿದ್ದಾರೆ.

2014ರಲ್ಲಿ ಹೆಚ್ಚು ನಕ್ಸಲ್ ಚಟುವಟಿಕೆಯಿಂದ ಕೂಡಿದ ಜಿಲ್ಲೆಗಳ ಸಂಖ್ಯೆ 35 ಇತ್ತು. ಆದರೆ, 2025ರ ಹೊತ್ತಿಗೆ ಈ ಸಂಖ್ಯೆ ಆರಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ 126ರಿಂದ 18ಕ್ಕೆ ಇಳಿದಿದೆ.

2014ರಲ್ಲಿ ವರದಿಯಾದ ಹಿಂಸಾತ್ಮಕ ಘಟನೆಗಳ ಸಂಖ್ಯೆ 1,080ದಷ್ಟಿತ್ತು. 2024ರ ಹೊತ್ತಿಗೆ 374 ಘಟನೆಗಳು ವರದಿಯಾಗಿದೆ. 2014ರಲ್ಲಿ ನಕ್ಸಲ್ ಹಿಂಸಾಚಾರದಲ್ಲಿ 287 ಭದ್ರತಾ ಸಿಬ್ಬಂದಿಗಳು ಮೃತಪಟ್ಟಿದ್ದರೆ, 2024ರಲ್ಲಿ 19 ಮಂದಿ ಮೃತಪಟ್ಟಿದ್ದರು. ಇದೇ ಅವಧಿಯಲ್ಲಿ 2089 ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.

2024ರಲ್ಲಿ 928 ನಕ್ಸಲರು ಭದ್ರತಾ ಪಡೆಗಳ ಎದುರು ಶರಣಾಗಿದ್ದಾರೆ. ಆದರೆ ಈ ವರ್ಷ ಇಲ್ಲಿಯವರೆಗೆ 718 ನಕ್ಸಲರು ಶರಣಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

'ನಾವು ನಿರಂತರ ಮತ್ತು ನಿರ್ದಯವಾಗಿ ಕಾರ್ಯಾಚರಣೆಗಳ ಮೂಲಕ 2026ರ ಮಾರ್ಚ್ 31ರೊಳಗೆ ನಕ್ಸಲಿಸಂ ಅನ್ನು ನಿರ್ಮೂಲನೆ ಮಾಡಲು ಬದ್ಧರಾಗಿದ್ದೇವೆ' ಎಂದು ಸಿಂಗ್‌ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries