ನವದೆಹಲಿ: ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ನಂಟಿದೆ ಎನ್ನಲಾದ ನ್ಯಾಷನಲ್ ಹೆರಾಲ್ಡ್ ಹಣ ಅಕ್ರಮ ವರ್ಗಾವಣೆ ಪ್ರಕರಣದ ವಿಚಾರಣೆಯನ್ನು ದೆಹಲಿಯಲ್ಲಿನ ನ್ಯಾಯಾಲಯ ಮೇ 21 ಹಾಗೂ 22ಕ್ಕೆ ಮುಂದೂಡಿದೆ.
ಜಾರಿ ನಿರ್ದೇಶನಾಲಯದ ವಾದವನ್ನು ಆಲಿಸಿದ ವಿಶೇಷ ನ್ಯಾಯಧೀಶರಾದ ವಿಶಾಲ್ ಗೊಗ್ನೆ ಅವರು, ಪ್ರಕರಣದಲ್ಲಿ ಸಹ ಆರೋಪಿಯಾಗಿರುವ ಸ್ಯಾಮ್ ಪಿತ್ರೋಡಾಗೆ ಗುರುವಾರವಷ್ಟೇ ಇ-ಮೇಲ್ ಮೂಲಕ ನೋಟಿಸ್ ಕಳುಹಿಸಿದ್ದರಿಂದ, ಆರೋಪ ಪಟ್ಟಿಯನ್ನು ಪರಿಗಣಿಸುವ ಬಗ್ಗೆ ಮುಂದಿನ ದಿನಾಂಕದಂದು ವಾದವನ್ನು ಆಲಿಸುವುದು ಸೂಕ್ತವಾದಿತು ಎಂದು ಹೇಳಿದ್ದಾರೆ.
ಪ್ರಕರಣದ ಸಂಬಂಧ ಮೇ 2ರಂದು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ಕೋರ್ಟ್ ನೋಟಿಸ್ ಜಾರಿ ಮಾಡಿತ್ತು. ಇವರಿಬ್ಬರ ಜೊತೆಗೆ ಕಾಂಗ್ರೆಸ್ ನಾಯಕರಾದ ಸ್ಯಾಮ್ ಪಿತ್ರೊಡಾ ಹಾಗೂ ಸುಮನ್ ದುಬೆ, ಯಂಗ್ ಇಂಡಿಯನ್, ಡೊಟೆಕ್ಸ್ ಮರ್ಚೆಂಡೈಸ್ ಪ್ರೈವೆಟ್ ಲಿಮಿಟೆಡ್ ಹಾಗೂ ಸುನಿಲ್ ಭಂಡಾಾರಿಗೂ ನೋಟಿಸ್ ನೀಡಿತ್ತು.
ನ್ಯಾಷನಲ್ ಹೆರಾಲ್ಡ್ ಪ್ರಕರಣ ಕಾನೂನು ವಿಷಯವಲ್ಲ, ರಾಜಕೀಯ ಪಿತೂರಿ: ಕನ್ಹಯ್ಯಕುಮಾರ್
ವಾದವನ್ನು ಆಲಿಸುವ ಅವರ ಹಕ್ಕನ್ನು ದೋಷಾರೋಪ ಪಟ್ಟಿಯ ಪರಿಗಣನೆಯ ವೇಳೆ ನೀಡಲಾಗುವುದು ಎಂದು ನ್ಯಾಯಾಧೀಶರು ಹೇಳಿದ್ದಾರೆ. ಪ್ರಕರಣ ಸಂಬಂಧ ಹಣ ಅಕ್ರಮ ವರ್ಗಾವಣೆ, ಹಣ ಅಕ್ರಮ ವರ್ಗಾವಣೆಗೆ ಶಿಕ್ಷೆ ಹಾಗೂ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಹೀಗೆ ಮೂರು ವಿಭಾಗಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ನ್ಯಾಷನಲ್ ಹೆರಾಲ್ಡ್‌ನಲ್ಲಿ ನಡೆದಿದೆ ಎನ್ನಲಾದ ಹಣ ಅಕ್ರಮ ವರ್ಗಾವಣೆ ಬಗ್ಗೆ 2014ರ ಜೂನ್ 26ರಂದು ಸುಬ್ರಮಣಿಯನ್ ಸ್ವಾಮಿ ಖಾಸಗಿ ದೂರು ದಾಖಲಿಸಿದ್ದರು. 2021ರಲ್ಲಿ ತನಿಖೆ ಆರಂಭಿಸಿದ್ದ ಇ.ಡಿ ಇತ್ತೀಚೆಗಷ್ಟೇ ದೋಷಾರೋಪ ಪಟ್ಟಿ ಸಲ್ಲಿಸಿತ್ತು.






