ನವದೆಹಲಿ : ಆಪರೇಷನ್ ಸಿಂಧೂರ್ ಗೆ ಪರಮಪಾಪಿ ಪಾಕ್ ಬೆಚ್ಚಿಬಿದ್ದಿದ್ದು, ಮುಂದೇನಪ್ಪ ನನ್ನ ಗತಿ ಅಂತ ತಲೆ ಮೇಲೆ ಕೈಹೊತ್ತು ಕುಳಿತಿದೆ. ಭಾರತದ ಭದ್ರತಾಪಡೆಗಳ ಆಕ್ರಮಣಾಕಾರಿ ದಾಳಿಗೆ ಪಾಕ್ ಗಢಗಢ ನಡುಗಿ ಹೋಗಿದ್ದು, ಈಗ ಜೀವಭಿಕ್ಷೆ ಕೇಳಿದೆ.
ಭಾರತದ ದಾಳಿಗೆ ನೆರೆಯ ದೇಶ ಪಾಕಿಸ್ತಾನ ಬೆಚ್ಚಿಬಿದ್ದಿದ್ದು, ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮತ್ತು ಐಎಸ್‌ಐ ಮುಖ್ಯಸ್ಥ ಅಸಿಮ್ ಮಲಿಕ್ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಕರೆ ಮಾಡಿ ಮಾತನಾಡಿದ್ದಾರೆ.
ಭವಿಷ್ಯದಲ್ಲಿ ಉಗ್ರರ ಶಮನಕ್ಕೆ ಯಾವುದೇ ರೀತಿಯ ಸಹಕಾರ ನೀಡೋಕೆ ಬದ್ಧ. ದಯವಿಟ್ಟು ಕ್ಷಮಿಸಿಬಿಡಿ. ಮುಂದೆ ಯಾವ ರೀತಿಯ ಆಕ್ರಮಣಕಾರಿ ಅಟ್ಯಾಕ್ ಬೇಡ ಎಂದು ಕಳಕಳಿಯಾಗಿ ಬೇಡಿಕೊಂಡಿದ್ದಾರೆ.
ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್ ಖಾಸಗಿ ಸಂದರ್ಶನವೊಂದರಲ್ಲಿ ಮಲಿಕ್ ಮತ್ತು ಅಜಿತ್ ದೋವಲ್ ಅವರ ನಡುವಿನ ಸಂಭಾಷಣೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಭಾರತದಿಂದ ಇಷ್ಟರಮಟ್ಟಿಗಿನ ಪ್ರತೀಕಾರವನ್ನು ಪಾಕ್ ನಿರೀಕ್ಷಿಸಿರಲಿಲ್ಲ. ಹೀಗಿರುವಾಗ ಆಪರೇಷನ್ ಸಿಂಧೂರ್ ಗೆ ಬೆಚ್ಚಿಬಿದ್ದಿರುವ ಪಾಕ್, ಭವಿಷ್ಯದ ದಾಳಿ ಬಗ್ಗೆ ಭಯಭೀತಗೊಂಡಿದ್ದು, ಇದರ ಭಾಗವಾಗಿಯೇ ಫೋನ್ ಸಂಭಾಷಣೆ ನಡೆದಿದೆ ಎಂದು ಹಲವರು ವಿಶ್ಲೇಷಣೆ ಮಾಡ್ತಿದ್ದಾರೆ.






