ತಿರುವನಂತಪುರಂ: ಕೇರಳ ಹೈಯರ್ ಸೆಕೆಂಡರಿ ಪರೀಕ್ಷಾ ನಿರ್ದೇಶನಾಲಯವು 12 ನೇ ತರಗತಿಯ ಬೋರ್ಡ್ ಪರೀಕ್ಷಾ ಫಲಿತಾಂಶಗಳನ್ನು ಮೇ 22 ರಂದು ಪ್ರಕಟಿಸಲಿದೆ ಎಂದು ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಹಿಂದಿನ ಪ್ರಕಟಣೆಯ ಪ್ರಕಾರ ಫಲಿತಾಂಶಗಳು 21 ರಂದು ಪ್ರಕಟಿಸಲಾಗುವುದು ಎಂದಿತ್ತು. ಮಧ್ಯಾಹ್ನ 3:00 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ.
ಅಭ್ಯರ್ಥಿಗಳು ಕೇರಳ ಪ್ಲಸ್ ಟು ಫಲಿತಾಂಶ 2025 ಅನ್ನು ಅಧಿಕೃತ ಫಲಿತಾಂಶ ವೆಬ್‍ಸೈಟ್‍ಗಳಾದ ಞeಡಿಚಿಟಚಿಡಿesuಟಣs.ಟಿiಛಿ.iಟಿ, ಜhseಞeಡಿಚಿಟಚಿ.gov.iಟಿ ಮತ್ತು ಡಿesuಟಣ.ಞiಣe.ಞeಡಿಚಿಟಚಿ.gov.iಟಿ ನಲ್ಲಿ ಪರಿಶೀಲಿಸಬಹುದು. ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಡಿಜಿಲಾಕರ್‍ನಲ್ಲಿಯೂ ಪರಿಶೀಲಿಸಬಹುದು.
ಕಳೆದ ವರ್ಷ ಮೇ 9 ರಂದು ಕೇರಳ ಪ್ಲಸ್ ಟು ಫಲಿತಾಂಶಗಳು ಪ್ರಕಟವಾಗಿದ್ದವು. ಕೇರಳದ 10ನೇ ತರಗತಿಯ ಪರೀಕ್ಷಾ ಫಲಿತಾಂಶಗಳನ್ನು ಮೇ 9 ರಂದು ಘೋಷಿಸಲಾಗಿತ್ತು.






