HEALTH TIPS

'ಮಹಾ' ವಿವಿಎಂಸಿ ನಗರ ಯೋಜನೆ ಹಗರಣ: ₹23 ಕೋಟಿ ಮೌಲ್ಯದ ವಜ್ರಾಭರಣ ಜಪ್ತಿ

ನವದೆಹಲಿ: ಸರ್ಕಾರಿ ಕಟ್ಟಡಗಳ ಅನಧಿಕೃತ ನಿರ್ಮಾಣ ಪ್ರಕರಣದಲ್ಲಿ ಮಹಾರಾಷ್ಟ್ರದ ವಾಸೈ ವಿರಾರ್ ನಗರಪಾಲಿಕೆಯ (ವಿವಿಎಂಸಿ) ನಗರ ಯೋಜನೆ ಉಪನಿರ್ದೇಶಕ ವೈ.ಎಸ್‌.ರೆಡ್ಡಿ ಅವರಿಗೆ ಸೇರಿದ 13 ಸ್ಥಳಗಳಲ್ಲಿ ಶೋಧ ನಡೆಸಿದ ಜಾರಿ ನಿರ್ದೇಶನಾಲಯ(ಇ.ಡಿ) ₹ 9.04 ಕೋಟಿ ನಗದು ಮತ್ತು ₹ 23.25 ಕೋಟಿ ಮೌಲ್ಯದ ವಜ್ರಾಭರಣಗಳನ್ನು ಜಪ್ತಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2009ರಿಂದ ವಿವಿಎಂಸಿ ವ್ಯಾಪ್ತಿಯ ವಾಸೈ ವಿರಾರ್ ಪ್ರದೇಶದಲ್ಲಿ ಸರ್ಕಾರಿ ಮತ್ತು ಖಾಸಗಿ ಜಾಗಗಳಲ್ಲಿ ವಸತಿ ಹಾಗೂ ವಾಣಿಜ್ಯ ಕಟ್ಟಡ ನಿರ್ಮಿಸಲಾಗಿತ್ತು. ತ್ಯಾಜ್ಯ ನೀರು ಸಂಸ್ಕರಣೆ ಮತ್ತು ತ್ಯಾಜ್ಯ ವಿಲೇವಾರಿಗೆ ಮೀಸಲಿದ್ದ ಜಾಗದಲ್ಲಿ 41 ಅಕ್ರಮ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಇದಕ್ಕೆ ಸಮ್ಮತಿಸಿ ವೈ.ಎಸ್‌.ರೆಡ್ಡಿ ಅವರ ಮೇಲೂ ಆರೋಪ ದಾಖಲಿಸಲಾಗಿತ್ತು. ಶೋಧದ ಸಂದರ್ಭದಲ್ಲಿ ಮಹತ್ವದ ದಾಖಲೆಗಳೂ ಲಭ್ಯವಾಗಿವೆ ಎಂದು ಇ.ಡಿ.ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ಮುಂಬೈ, ಹೈದರಾಬಾದ್ ಸೇರಿದಂತೆ ಅಧಿಕಾರಿಗೆ ಸಂಬಂಧಿಸಿದ ಹಲವು ಕಡೆಗಳಲ್ಲಿ ಆರಂಭವಾಗಿದ್ದ ಶೋಧವು ಗುರುವಾರವೂ ಮುಂದುವರೆಯಿತು.

ಬಿಲ್ಡರ್‌ಗಳು ಮತ್ತು ಡೆವಲಪರ್‌ಗಳು ಅಕ್ರಮ ಕಟ್ಟಡ ನಿರ್ಮಿಸಿ, ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು. ಅನಧಿಕೃತ ಕಟ್ಟಡವನ್ನು ತೆರವು ಮಾಡುವುದು ಗೊತ್ತಾದ ನಂತರವೂ ಜನರನ್ನು ನಂಬಿಸಿ ಮನೆಗಳನ್ನು ಮಾರಾಟ ಮಾಡಲಾಗಿತ್ತು. ಬಿಲ್ಡರ್‌ಗಳು ಮತ್ತು ಡೆವಲಪರ್‌ಗಳ ವಿರುದ್ಧ ಮೀರಾ ಭಯಂದರ್‌ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದ ನಂತರ ಇ.ಡಿ. 2002ರಲ್ಲೇ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿ ತನಿಖೆ ಆರಂಭಿಸಿತ್ತು.

2024ರ ಜುಲೈನಲ್ಲಿ ಬಾಂಬೆ ಹೈಕೋರ್ಟ್‌ 41 ಅಕ್ರಮ ಕಟ್ಟಡಗಳ ನೆಲಸಮ ಮಾಡಲು ಆದೇಶ ನೀಡಿತ್ತು. ಕಟ್ಟಡಗಳ ನಿವಾಸಿಗಳು ಸಲ್ಲಿಸಿದ್ದ ಮೇಲ್ಮನವಿ ಸುಪ್ರೀಂ ಕೋರ್ಟ್‌ನಲ್ಲೂ ತಿರಸ್ಕಾರ ಆಗಿತ್ತು. 2024ರ ಫೆಬ್ರವರಿಯಲ್ಲೇ ಈ ಕಟ್ಟಡಗಳನ್ನು ವಿವಿಎಂಸಿ ನೆಲಸಮ ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries