ಕಾಸರಗೋಡು: ಕೇರಳ ಒಲಿಂಪಿಕ್ ಅಸೋಸಿಯೇಶನ್‍ನೊಂದಿಗೆ ನೋಂದಾವಣೆಗೊಂಡಿರುವ ಕರಾಟೆ ಕಲೆ'ವುಶು'ಅಸೋಸಿಯೇಶನ್ ವತಿಯಿಂದ ರಾಷ್ಟ್ರಮಟ್ಟದ ಚಾಂಪ್ಯನ್‍ಶಿಪ್ ಮೇ 26ರಿಂದ 31ರ ವರೆಗೆ ಚೆನ್ನೈನಲ್ಲಿ ನಡೆಯಲಿರುವುದಾಗಿ ಅಸೋಸಿಯೇಶನ್ ಕಾಸರಗೋಡು ಜಿಲ್ಲಾ ಸಮಿತಿ ಕಾರ್ಯದರ್ಶಿ ಅನಿಲ್‍ಕುಮಾರ್ ಪಿ.ವಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೇ 7ರಂದು ಚೆರ್ವತ್ತೂರಿನಲ್ಲಿ ಜಿಲ್ಲಾ ಮಟ್ಟದ ಚಾಂಪ್ಯನ್‍ಶಿಪ್ ಹಾಗೂ 10ಕ್ಕೆ ಕೋಯಿಕ್ಕೋಡಿನಲ್ಲಿ ರಾಜ್ಯಮಟ್ಟದ ಚಾಂಪ್ಯನ್‍ಶೀಪ್ ನೆರವೇರಿದ್ದು, ರಾಜ್ಯಮಟ್ಟದಲ್ಲಿ ಕಾಸರಗೋಡು ಜಿಲ್ಲೆಗೆ ಒಂದು ಚಿನ್ನ ಮತ್ತು ಐದು ಕಂಚಿನ ಪದಕ ಲಭ್ಯವಾಗಿದೆ.
ಈ ಮಧ್ಯೆ ಕೆಲವು ಕರಾಟೆ ಶಿಕ್ಷಕರು ಒಟ್ಟುಸೇರಿ'ವುಶು'ಸಂಘಟನೆಗೆದುರಾಗಿ ಕಾಸರಗೋಡು ಜಿಲ್ಲಾ ರಗ್ಬಿ ಅಸೋಸಿಯೇಷನ್‍ನ ಜಿಲ್ಲಾ ಪದಾಧಿಕಾರಿಗಳು ಮೇ 18ರಂದು ಜಿಲ್ಲಮಟ್ಟದ 'ವುಶು'ಸ್ಪರ್ಧೆ ಅಯೋಜಿಸುವ ಮೂಲಕ ಸ್ಪರ್ಧಾಳುಗಳಲ್ಲಿ ಗೊಂದಲವನ್ನುಂಟುಮಾಡುತ್ತಿದ್ದಾರೆ. ಯಾವುದೇ ತರಬೇತಿಯನ್ನು ಪಡೆಯದೆ, ಕೇವಲ ಕರಾಟೆ ಕಲಿತ ಮಕ್ಕಳಿಂದ ಅಪಾಯಕಾರಿ ಸ್ಪರ್ಧೆ'ವುಶು'ಕಲೆಯನ್ನು ಕಲಿಸುವ ಮೂಲಕ ಮಕ್ಕಳನ್ನು ಬಲಿಪಶುಮಾಡುವುದನ್ನು ಕೊನೆಗಾಣಿಸಬೇಕು. ರಾಷ್ಟ್ರೀಯ ಚಾಂಪ್ಯನ್‍ಶೀಪ್‍ಗೆ ಭಾಗವಹಿಸಲು ಹೆಸರುನೋಂದವಣೆಗೆ ಮೇ 16 ಕೊನೆಯ ದಿನಾಂಕವಾಗಿದ್ದರೂ, ಈ ನಕಲಿ ಸಂಸ್ಥೆ ಮೇ 18ರಂದು ಜಿಲ್ಲಾ ಸ್ಪರ್ಧೆ ಆಯೋಜಿಸುವ ಮೂಲಕ ಮಕ್ಕಳನ್ನು ಹಾದಿ ತಪ್ಪಿಸುವ ಯತ್ನ ನಡೆಸುತ್ತಿದೆ. ಈ ಬಗ್ಗೆ ಪೊಲೀಸ್ ಹಾಗೂ ಅಸೋಸಿಯೇಶನ್‍ಗೆ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಕಣ್ಣನ್ ಕುಞÂ ಟಿ, ರೆಫ್ರಿ ನಿವೇದ್ ನಾರಾಯಣನ್, ಅಂಜಲಿ ಉಪಸ್ಥಿತರಿದ್ದರು.




