ಕಾಸರಗೋಡು: ರಸ್ತೆ ನವೀಕರಣ ಕಾರ್ಯದ ಅಂಗವಾಗಿ ಕಾಸರಗೋಡಿನ ಕರಂದಕ್ಕಾಡ್ ಜಂಕ್ಷನ್‍ನಿಂದ ರೈಲ್ವೆ ನಿಲ್ದಾಣ ರಸ್ತೆಯ ಗಡಿಯಾರ ಗೋಪುರದವರೆಗಿನ ರಸ್ತೆಯನ್ನು ಮೇ 14ರಿಂದ ಮುಂದಿನ ಸೂಚನೆ ವರೆಗೆ ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ಲೋಕೋಪಯೋಗಿ ಇಲಾಖೆ ರಸ್ತೆ ವಿಭಾಗ ಕಾರ್ಯನಿರ್ವಾಹಕ ಅಭಿಯಂತರರ ಪ್ರಕಟಣೆ ತಿಳಿಸಿದೆ.





