ಬದಿಯಡ್ಕ: ಅಗಲ್ಪಾಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದ 46ನೇ ವಾರ್ಷಿಕೋತ್ಸವವು ತಂತ್ರಿವರ್ಯರಾದ ವೇದಮೂರ್ತಿ ಬಳ್ಳಪದವು ಡಾ. ಮಾಧವ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಅಂದು ಅರುಣೋದಯ ಕಾಲದಲ್ಲಿ ಶ್ರೀಮಂದಿರದ ಅಧ್ಯಕ್ಷ ಬಾಬುಮಾಸ್ತರ್ ಅಗಲ್ಪಾಡಿ ಧ್ವಜಾರೋಹಣಗೈದರು. ಶುದ್ಧಿಕಲಶ, ಗಣಪತಿ ಹೋಮ, ವಿವಿಧ ಭಜನಾ ತಂಡಗಳಿಂದ ಭಜನೆ, ಚಪ್ಪರ ಮದುವೆ, ತುಳಸೀ ಹಾರ ನೇಯುವ ಸ್ಪರ್ಧೆ, ತುಲಾಭಾರ ಸೇವೆ ಜರಗಿತು.
ಧಾರ್ಮಿಕ ಸಭೆ :
ಶ್ರೀಮಂದಿರದ ಅಧ್ಯಕ್ಷ ಬಾಬುಮಾಸ್ತರ್ ಅಗಲ್ಪಾಡಿ ಅವರ ಅಧ್ಯಕ್ಷತೆಯಲ್ಲಿ ವಾಗ್ಮಿ ಡಿ.ಎನ್. ಮಣಿಯಾಣಿ ಮಾನ್ಯ ಕಾರ್ಕಳ ಧಾರ್ಮಿಕ ಉಪನ್ಯಾಸ ನೀಡಿದರು. ಧಾರ್ಮಿಕ ಕ್ಷೇತ್ರಗಳಲ್ಲಿ ನಿರಂತರ ಸನಾತನೀಯ ಚಟುವಟಿಕೆಗಳು ನಡೆಯುತ್ತಿರಬೇಕು. ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವಂತಹ ಕಾರ್ಯಕ್ರಮಗಳು ನಡೆಸುತ್ತಾ ಮುಂದಿನ ತಲೆಮಾರಿಗೆ ದಾರಿದೀಪವಾಗಬೇಕು. ಯುವಕರಿಗೆ ವಿವಿಧ ಧಾರ್ಮಿಕ ಕಾರ್ಯಗಳ ಜವಾಬ್ದಾರಿಯನ್ನು ನೀಡಿ ಅವರನ್ನು ಧರ್ಮರಕ್ಷಣಾ ಕಾರ್ಯಕ್ಕೆ ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದು ಕರೆನೀಡಿದರು.
ಡಾ.ಬೇ.ಸೀ.ಗೋಪಾಲಕೃಷ್ಣ ಭಟ್, ರಾಜೇಶ್ ಪದ್ಮಾರು ಬೆಂಗಳೂರು, ಸಂತೋಷ್ ರೈ ಗಾಡಿಗುಡ್ಡೆ, ಸಾಮಾಜಿಕ ಕಾರ್ಯಕರ್ತ ಪ್ರಸಾದ್ ಪಾಣಾಜೆ, ವಿನೋದ್ ಆಚಾರ್ಯ ಪುತ್ತೂರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ವಸಂತಿ ಟೀಚರ್ ಅಗಲ್ಪಾಡಿ, ಬಾಬು ಮಣಿಯಾಣಿ ಜಯನಗರ, ಜನಾರ್ಧನ ಮಣಿಯಾಣಿ ಬೆದ್ರುಕೂಡ್ಲು, ಸುಧಾಮ ಪದ್ಮಾರು, ನಿವೃತ್ತ ಪ್ರೊ. ಶ್ರೀನಾಥ್ ಕೊಲ್ಲಂಗಾನ, ದೀಪಕ್ ಬೆದ್ರುಕೂಡ್ಲು ಉಪಸ್ಥಿತರಿದ್ದರು. ಪ್ರಮುಖರಾದ ನಾರಾಯಣ ಭಟ್ ಕಲ್ಲಕಳಂಬಿ, ಶ್ರೀಧರ ಮಣಿಯಾಣಿ ಮಂಗಳೂರು, ಗಣೇಶ್ ಭಟ್ ಅಳಕ್ಕೆ ನೀರ್ಚಾಲು ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಅಗಲ್ಪಾಡಿ ಪಾಂಚಜನ್ಯ ಕುಣಿತ ಭಜನಾ ಸಂಘದ ಶಿಕ್ಷಕ ರವಿರಾಜ್ ಏಳ್ಕಾನ, ಭಜನಾ ಸಂಘದ ಶಿಕ್ಷಕಿ ಕು| ಶಿವಪ್ರಿಯಾ ಇವರನ್ನು ಅಭಿನಂದಿಸಲಾಯಿತು. ಅಗಲ್ಪಾಡಿ ಪುರದೊಡೆಯ ಭಕ್ತಿಗೀತೆಯನ್ನು ಬಿಡುಗಡೆಗೊಳಿಸಲಾಯಿತು. ಎಸ್.ಎಸ್.ಎಲ್.ಸಿ.ಯಲ್ಲಿ ಅತ್ಯಧಿಕ ಅಂಕ ಗಳಿಸಿದ ವೈಷ್ಣವಿ ಎಂ., ವೇದಾಂತ್ ಆರ್.ಪಿ., ಧೀಕ್ಷಾ ಯಾದವ್ ಸಿ.ಎಚ್. ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಾಂಸ್ಕøತಿಕ ಸ್ಪರ್ಧಾ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯದರ್ಶಿ ರಮೇಶ್ ಕೃಷ್ಣ ಪದ್ಮಾರು ವಾರ್ಷಿಕ ವರದಿಯನ್ನು ನೀಡಿದರು. ಪ್ರಧಾನ ಕಾರ್ಯದರ್ಶಿ ಅಚ್ಚುತ ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ಕಾರ್ಯದರ್ಶಿ ರಾಜೇಶ್ ಮಾಸ್ತರ್ ಅಗಲ್ಪಾಡಿ ವಂದಿಸಿದರು. ಯಾದವ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಉದಯಕುಮಾರ್ ಕಲ್ಲಕಟ್ಟ ನಿರೂಪಿಸಿದರು. ಪಾಂಚಜನ್ಯ ಬಾಲಗೋಕುಲದ ಶಿಕ್ಷಕಿ ಲಾವಣ್ಯ ಗಿರೀಶ್ ಪ್ರಾರ್ಥನೆ ಹಾಡಿದರು.
ಯುವ ವಿಭಾಗದ ವತಿಯಿಂದ ಪಾತ್ರೆ ಸಮರ್ಪಣೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಪ್ರಸಾದ. ಅಪರಾಹ್ನ ಸುಧಾಕರ ಕೋಟೆಕುಂಜತ್ತಾಯ ಕಾಸರಗೋಡು ಇವರಿಂದ ಭಕ್ತಸುದಾಮ ಹರಿಕಥಾ ಸತ್ಸಂಗ, ನಮಸ್ತೆ ಇಂಡಿಯಾ ಬೆಂಗಳೂರು ಸಾದರಪಡಿಸುವ ಪೌರಾಣಿಕ ರಸಪ್ರಶ್ನೆ, ವಿವಿಧ ಭಜನಾ ಸಂಘಗಳಿಂದ ಭಜನೆ, ರಾತ್ರಿ ಮಹಾಪೂಜೆ, ಮಹಾಮಂಗಳಾರತಿ, ಅನ್ನಪ್ರಸಾದ ವಿತರಣೆ ನಡೆಯಿತು. ಸಂಜೆ ಕೈಕೊಟ್ಟಿಕಳಿ, ಪಾಂಚಜನ್ಯ ಬಾಲಗೋಕುಲದ ವಿದ್ಯಾರ್ಥಿಗಳಿಂದ ನೃತ್ಯವೈವಿಧ್ಯ, ರಾತ್ರಿ ಕಲಾರತ್ನ ಪ್ರಶಸ್ತಿ ಪುರಸ್ಕøತ ಪ್ರವೀಣ್ ಜಯ್ ಸಾರಥ್ಯದ ನ್ಯೂ ಶೈನ್ ಮ್ಯೂಸಿಕಲ್ ವಿಟ್ಲ ಇವರಿಂದ ಭಕ್ತಿಗಾನಾಮೃತ ನಡೆಯಿತು. ಧ್ವಜಾವರೋಹಣದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
-ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ನೀಡಿದ ಸಂದೇಶ ಜಗತ್ತಿನ ಉದ್ಧಾರಕ್ಕೆ ನೀಡಿರುವುದಾಗಿದೆ. ಸಮಾಜದ ಉದ್ಧಾರ ಸಮಾಜದ ಕೈಯಲ್ಲಿದೆ. ಸಮಾಜವು ಅಧಃಪತನಕ್ಕೆ ಹೋಗದಂತೆ ಜಾಗೃತರಾಗಿ ನಾವು ಮುಂದುವರಿಯಬೇಕು ಎಂಬ ಚಿಂತೆ ಪ್ರತಿಯೊಬ್ಬರಲ್ಲೂ ಮೂಡಬೇಕು.
- ರಾಜೇಶ್ ಪದ್ಮಾರು, ಆರೆಸ್ಸೆಸ್ ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್




.jpg)
