ಸೋಶಿಯಲ್ ಮೀಡಿಯಾ ಕೇವಲ ವೈಯುಕ್ತಿಕ, ಚಾಟಿಂಗ್, ಮೆಸೇಜಿಂಗ್, ಸೋಶಿಯಲ್ ಕನೆಕ್ಟ್ ವೇದಿಕೆಯಾಗಿ ಉಳಿದಿಲ್ಲ. ಇದರಲ್ಲಿ ಅತೀ ದೊಡ್ಡ ಉದ್ಯಮವೊಂದಿದೆ. ಭಾರತದಲ್ಲಿ ಸೋಶಿಯಲ್ ಮೀಡಿಯಾ, ಯೂಟ್ಯೂಬ್ ಮೂಲಕ ಹಲವು ಕಂಟೆಂಟ್ ಕ್ರಿಯೇಟರ್ಸ್ ಆದಾಯ ಗಳಿಸುತ್ತಿದ್ದಾರೆ.
ಇದರ ಜೊತೆಗೆ ಹಲವರು ಯೂಟ್ಯೂಬ್ ಚಾನೆಲ್ ಆರಂಭಿಸುತ್ತಿದ್ದಾರೆ, ಸೋಶಿಯಲ್ ಮೀಡಿಯಾ ಮೂಲಕ ಫಾಲೋವರ್ಸ್, ಸಬ್‌ಸ್ಕ್ರೈಬ್ ಪಡೆದು ಆದಾಯದ ಮೂಲಕ ಹುಡುಕುತ್ತಿದ್ದಾರೆ. ಆದರೆ ಕೆಲವರು ಈ ಆದಾಯ ವಿಚಾರದಲ್ಲಿ ಯಶಸ್ಸು ಸಾಧಿಸಿದರೆ, ಬಹುತೇಕರು ಯೂಟ್ಯೂಬ್‌ನಿಂದ ಹಣ ಬರುತ್ತಿಲ್ಲ, ಸೋಶಿಯಲ್ ಮೀಡಿಯಾದಲ್ಲೂ ಆದಾಯ ಸಿಗುತ್ತಿಲ್ಲ ಅನ್ನೋ ಬೇಸರ ವ್ಯಕ್ತಪಡಿಸುತ್ತಾರೆ. ಭಾರತದಲ್ಲಿ ಹಾಗಾದರೆ ಯಾರು ಯೂಟ್ಯೂಬ್ ಮೂಲಕ ಹಣ ಮಾಡಲು ಸಾಧ್ಯ? ಇಲ್ಲಿನ ಯ್ಯೂಟ್ಯೂಬ್ ಕಂಟೆಂಟ್ ಹಾಗೂ ವೀಕ್ಷಕರ ಆಸಕ್ತಿ ಹೇಗಿದೆ? ಈ ಕುರಿತು ಬಾಸ್ಟನ್ ಕನ್ಸಲ್ಟಿಂಗ್ ಗ್ರೂಪ್ (BCG) ಮಹತ್ವದ ವರದಿ ನೀಡಿದೆ. ಈ ವರದಿ ಹಲವರಿಗೆ ನೆರವಾಗಲಿದೆ.
ಭಾರತದಲ್ಲಿ ಯೂಟ್ಯೂಬ್‌ನಿಂದ ಹಣ ಮಾಡುವವರೆಷ್ಟು?
ಭಾರತದಲ್ಲಿ 2 ರಿಂದ 2.5 ಮಿಲಿಯನ್ ಯೂಟ್ಯೂಬ್ ಚಾನೆಲ್ ಸಕ್ರಿಯವಾಗಿದೆ. ಅಂದರೆ ಪ್ರತಿ ದಿನ ಅಥವಾ 2 ರಿಂದ ಮೂರು ದಿನಕ್ಕೊಮ್ಮೆ ಕಂಟೆಂಟ್ ವಿಡಿಯೋ ಪೋಸ್ಟ್ ಮಾಡಲಾಗುತ್ತಿದೆ. ಈ ದೊಡ್ಡ ಸಂಖ್ಯೆಯಲ್ಲಿ ಕೇವಲ ಶೇಕಡಾ 8 ರಿಂದ 10 ರಷ್ಟು ಮಂದಿ ಮಾತ್ರ ಆದಾಯಗಳಿಸುತ್ತಿದ್ದಾರೆ. ಇನ್ನುಳಿದ ಶೇಕಾಡ 90 ರಿಂದ 92 ರಷ್ಟು ಮಂದಿ ಪ್ರಯತ್ನ ಪಡುತ್ತಿದ್ದಾರೆ. ಆದರೆ ಭಾರಿ ಕಡಿಮೆ ಹಣ ಅಥವಾ ಯಾವುದೇ ಹಣ ಬರುತ್ತಿಲ್ಲ ಎಂದು BCG ವರದಿ ಹೇಳುತ್ತಿದೆ.
ಶೇಕಡಾ 90ರಷ್ಟು ಭಾರತೀಯರ ಪ್ರಯತ್ನಕ್ಕೆ ಸಿಗುತ್ತಿಲ್ಲ ಫಲ
ಭಾರತದಲ್ಲಿ ಸರಾಸರಿ ಶೇಕಡಾ 90 ರಷ್ಟು ಸಕ್ರೀಯ ಯೂಟ್ಯೂಬ್ ಚಾನೆಲ್ ಆದಾಯ ಗಳಿಸಲು ವಿಫಲವಾಗುತ್ತಿದೆ. ಉತ್ತಮ ಕೆಂಟೆಂಟ್ ಸೇರದಂತೆ ಇತರ ಎಲ್ಲಾ ಮಾನದಂಡ ಪೂರೈಸಿದರೂ ವೀಕ್ಷಕರ ಸಂಖ್ಯೆ, ಸಬ್‌ಸ್ಕ್ರೈಬರ್, ವಾಚ್ ಹವರ್ ಹೆಚ್ಚಿಸಲು ಸಾಧ್ಯವಾಗುತ್ತಿಲ್ಲ. ಇತ್ತ ಹಣವೂ ಬರುತ್ತಿಲ್ಲ ಎಂದು BCG ವರದಿ ಹೇಳುತ್ತಿದೆ. ಈ ಶೇಕಡಾ 90 ರಷ್ಟು ಮಂದಿಯಲ್ಲಿ ಬಹುತೇಕರು ಇತರ ಪ್ರಾಯೋಜಕತ್ವ, ಸ್ಥಳೀಯ ಜಾಹೀರಾತು ಸೇರಿದಂತೆ ಇತರ ಮೂಲಗಳಿಂದ ಹಣ ಪಡೆಯುತ್ತಿದ್ದಾರೆ. ಆದರೂ ಅವರ ಶ್ರಮ ಹಾಗೂ ಖರ್ಚು ವೆಚ್ಚಕ್ಕೆ ಸಾಧ್ಯವಾಗುವುದಿಲ್ಲ ಎಂದು ವರದಿ ಹೇಳುತ್ತಿದೆ.
ಭಾರತದ ಬಹುತೇಕ ಕೆಂಟೆಂಟ್ ಕ್ರಿಯೇಟರ್ಸ್ ಸರಾಸರಿ ಆದಾಯ 18,000 ರೂಪಾಯಿ
ಭಾರತದಲ್ಲಿ ಬಹುತೇಕ ಯೂಟ್ಯೂಬ್ ಕಂಟೆಂಟ್ ಕ್ರಿಯಟರ್ಸ್ ಸರಾಸರಿ ಮಾಸಿಕ 18,000 ರೂಪಾಯಿ ಆದಾಯಗಳಿಸುತ್ತಾರೆ. ಇನ್ನು ಸಣ್ಣ ಕಂಟೆಂಟ್ ಕ್ರಿಯೇಟರ್ಸ್ ವಾರ್ಷಿಕ 3 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ. ಮಿಲಿಯನ್‌ಗೂ ಹೆಚ್ಚು ಸಬ್‌ಸ್ಕ್ರೈಬರ್, ಉತ್ತಮ ವಾಚ್ ಹವರ್, ಎಂಗೇಜ್‌ಮೆಂಟ್ ಹೊಂದಿದವರ ಸರಾಸರಿ ಮಾಸಿಕ ಆದಾಯ 50,000 ರೂಪಾಯಿ. ಇನ್ನು ಕೆಲವೇ ಕೆಲವು ಮಂದಿ ಲಕ್ಷ ರೂಪಾಯಿಯಲ್ಲಿ ಯೂಟ್ಯೂಬ್ ಮೂಲಕ ಆದಾಯಗಳಿಸುತ್ತಿದ್ದಾರೆ ಎಂದು BCG ವರದಿ ಹೇಳಿದೆ.
ಯಾವ ಕಂಟೆಂಟ್ ಜನರಿಗೆ ಇಷ್ಟ?
BCG ವರದಿ ಪ್ರಕಾರ ಭಾರತದಲ್ಲಿ ಫ್ಯಾಶನ್, ಬ್ಯೂಟಿ, ಫುಡ್ ಗೇಮಿಂಗ್, ಎಂಟರ್ನ್ಮೆಂಟ್ ಸೇರದಂತೆ ಕೆಲ ಕ್ಷೇತ್ರದ ಕೆಂಟೇಟ್ ಹೆಚ್ಚಿನ ಲೈಕ್ಸ್, ಎಂಗೇಜ್‌ಮೆಂಟ್, ವೀವ್ಸ್ ಪಡೆಯುತ್ತಿದೆ ಎಂದಿದೆ. ಇನ್ನು ಹಣಕಾಸು, ಶಿಕ್ಷಣ, ಟೆಕ್ ಸೇರಿದಂತೆ ಇತರ ಕೆಲ ಕಂಟೆಂಟ್‌ಗಳು ಎರಡನೇ ಹಾಗೂ ಮೂರನೇ ದರ್ಜೆ ನಗರದಲ್ಲಿ ಹೆಚ್ಚು ವೀವ್ಸ್ ಪಡೆಯುತ್ತಿದೆ ಎಂದು ವರದಿ ಹೇಳುತ್ತಿದೆ.
ಹೆಚ್ಚು ಎಂಗೇಜ್‌ಮೆಂಟ್ ಪಡೆಯುವಂತ ಕಂಟೆಂಟ್ ಕ್ರಿಯೆಟ್ ಮಾಡಬೇಕು. ಇದರ ಜೊತೆಗೆ ಕಂಟೆಂಟ್ ಯೂಟ್ಯೂಬ್ ನಿಮಯ ಮೀರುವಂತಿರಬಾರದು. ಜನರು ಇಷ್ಟಪಡಬೇಕು, ನೋಡಬೇಕು. ಹೀಗಾಗಿ ಭಾರತದಲ್ಲಿ ಹೆಚ್ಚಿನ ಕೆಂಟೇಟ್ ಕ್ರಿಯೇಟರ್ಸ್ ಆದಾಯಗಳಿಸುವಲ್ಲಿ ವಿಫಲವಾಗುತ್ತಿದ್ದಾರೆ ಎಂದು BCG ವರದಿ ಹೇಳಿದೆ.




