ಜಮ್ಮು: ಜಮ್ಮು ವಿಮಾನ ನಿಲ್ದಾಣದ ಮೇಲೆ ಪಾಕಿಸ್ತಾನದ ಡ್ರೋನ್-ಕ್ಷಿಪಣಿ ದಾಳಿ ರಾತ್ರಿ ಎಂಟರ ವೇಳೆಗೆ ನಡೆದಿದ್ದು, ಭಾರತೀಯ ಸೇನೆಯು ವಾಯು ರಕ್ಷಣೆಯ ಮೂಲಕ ಎಂಟು ಕ್ಷಿಪಣಿಗಳನ್ನು ತಟಸ್ಥಗೊಳಿಸಿತು.
ಭಾರತೀಯ ಸೇನೆ ಐವತ್ತಕ್ಕೂ ಹೆಚ್ಚು ಡ್ರೋನ್‌ಗಳನ್ನು ಹೊಡೆದುರುಳಿಸಿದೆ ಎಂದು ವರದಿಯಾಗಿದೆ. ಜಮ್ಮುವಿನಲ್ಲಿ ಸಂಪೂರ್ಣ ವಿದ್ಯುತ್ ಕಡಿತಗೊಂಡಿದೆ. ಪಾಕಿಸ್ತಾನ ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಯಾವುದೇ ಹಾನಿಯಾದ ಬಗ್ಗೆ ಇನ್ನೂ ವರದಿಯಾಗಿಲ್ಲ....ಪಾಕಿಸ್ತಾನ ಜಮ್ಮುವಿನಲ್ಲಿ ದೊಡ್ಡ ಪ್ರಮಾಣದ ಶೆಲ್ ದಾಳಿ ಮತ್ತು ಬಾಂಬ್ ದಾಳಿ ನಡೆಸುತ್ತಿದೆ.ಭಾರತೀಯ ಸೇನೆಯು ಬಲವಾಗಿ ಪ್ರತಿದಾಳಿ ನಡೆಸಿತು. ಜನರು ಹೊರಗೆ ಹೋಗದಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಜಮ್ಮು ವಿಮಾನ ನಿಲ್ದಾಣ, ಸಾಂಬಾ, ಆರ್‌ಎಸ್ ಪುರ ಅರ್ನಿಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದಿಂದ ಎಂಟು ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಭದ್ರತಾ ಸಂಸ್ಥೆಗಳು ದೃಢಪಡಿಸಿವೆ. S-400 ವಾಯು ರಕ್ಷಣಾ ವ್ಯವಸ್ಥೆಯು ಇವೆಲ್ಲವನ್ನೂ ನಾಶಪಡಿಸಿತು.




