HEALTH TIPS

ಮಂಜೇಶ್ವರ ಕಾಸರಗೋಡು ಜಿಲ್ಲಾ ಕುಲಾಲ ಸಮುದಾಯ ಭವನದ ಮಿನಿ ಸಭಾಂಗಣದ ಉದ್ಘಾಟನೆ, ಉಚಿತ ಪುಸ್ತಕ ವಿತರಣೆ, ಸಹಾಯ ಹಸ್ತ ವಿತರಣೆ,ಮಹಾಸಭೆ

ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ, ತೂಮಿನಾಡು ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಕುಲಾಲ ಸುಮುದಾಯ ಭವನದ ನೆಲ ಅಂತಸ್ತಿನಲ್ಲಿ ನಿರ್ಮಾಣಗೊಂಡಿರುವ ಮಿನಿ ಸಭಾಂಗಣದ ಉದ್ಘಾಟನೆ bಚಿಓUಗಿಚಿಖ ಜರಗಿತು.

ಸಮುದಾಯದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಉಚಿತ ಪುಸ್ತಕ ವಿತರಣೆ, 2024-25  ರ ಸಾಲಿನ ಎಸ್. ಎಸ್. ಎಲ್. ಸಿ ಹಾಗೂ ಪ್ಲಸ್ ಟು /ಪಿ. ಯು. ಸಿ ಯ ಕರ್ನಾಟಕ ಕೇರಳ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ, ಸಹಾಯಹಸ್ತ ವಿತರಣೆ ಕಾರ್ಯಕ್ರಮ ಮತ್ತು ಸಂಘದ ವಾರ್ಷಿಕ ಮಹಾಸಭೆಯು ಜರಗಿತು. ಬೆಳಗ್ಗೆ 8 ರಿಂದ ಗಣಹೋಮ, 8.45 ರಿಂದ ಶ್ರೀ ಬಾಲಾmಜನೇಯ ವ್ಯಾಯಾಮ ಶಾಲೆ ಭಜನಾ ತಂಡ ಮತ್ತು ಶ್ರೀ ಮಹಾಕಾಳಿ ಭಜನಾ ಮಂಡಳಿ ತೂಮಿನಾಡು ತಂಡಗಳಿಂದ ಭಜನೆ ಹಾಗೂ ನಂದಗೋಕುಲ ಭಜನಾ ತಂಡ ತೂಮಿನಾಡು ತಂಡದಿಂದ ಕುಣಿತ ಭಜನೆ ನಡೆಯಿತು. ಒಚಿಟಿIಐ sಈಖiಜಚಿಒಆ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. 


    

ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ಕುಲಶೇಖರದ ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಕೋಡಿಕಲ್ ಸಭಾಂಗಣವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ  ದಿವಾಕರ ಮೂಲ್ಯ, ಗಣೇಶ್ ಕುಲಾಲ್, ಅನಿಲ್ ದಾಸ್, ಕಮಲಾಕ್ಷೀ ವಿ.ಕುಲಾಲ್, ಜಯಂತಿ ಬದಿಯಡ್ಕ, ಮಾಲತಿ ಪಿ., ಜಯಪ್ರಕಾಶ್ ಕೈರಂಗಳ, ಸುಂದರ ಕುಲಾಲ್ ಶಕ್ತಿನಗರ, ದಾಮೋದರ ಅಶೋಕನಗರ, ಸುರೇಶ್ ಕುಲಾಲ್, ಉಪಸ್ಥಿತರಿದ್ದರು. 

ಈ ಸಂದರ್ಭದಲ್ಲಿ ಸಾಧಕರಿಗೆ ಗೌರವಾರ್ಪಣೆ ನಡೆಯಿತು. ಸಾಧಕರಾದ ಕರಾಟೆ ಪಟು ಕು.ಸ್ವಾತಿ ಕೊಡಂಗೆ, ಯಕ್ಷಗಾನ ಕಲಾವಿದ ಜಯೇಂದ್ರ ಕುಲಾಲ್ ಕಿದೂರು, ಸಮಾಜ ಸೇವೆಗಾಗಿ ರಾಮಪ್ರಸಾದ್ ಯಸ್. ಮಂಗಳೂರು, ದೇಶ ಸೇವೆಗೆ ಪೂವಪ್ಪ ಕಡಂಬಾರ್,  ದೈವಾರಾದನೆ ಗೋಪಾಲಕೃಷ್ಣ ವಾಂತಿಚ್ಚಾಲ್, ಪ್ರಗತಿಪರ ಕೃಷಿಕ ಶೇಷ ಮೋಹನ್ ನೇರಪ್ಪಾಡಿ, ವಿದ್ಯಾರ್ಥಿ ಪೆÇಲೀಸ್ ಕೆಡೆಟ್ ನಲ್ಲಿ ಕೇರಳ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕು.ರಶ್ಮಿತ.ಕೆ. ತೂಮಿನಾಡು, ಕೇರಳ ರಾಜ್ಯ ಮಟ್ಟದ ಜೂನಿಯರ್ ಗಲ್ರ್ಸ್ ಕಬ್ಬಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ಕು. ಸೃಷ್ಟಿ ಕುಂಜತ್ತೂರು ಇವರನ್ನು ಗೌರವಿಸಲಾಯಿತು.


ಆಶಕ್ತ ಕುಟುಂಬಕ್ಕೆ ನೀಡುವ ಕುಲಾಲ ಆಸರೆಯ 7 ನೇ ಸಹಾಯ ಹಸ್ತ ಯೋಜನೆ ರೂ. 15,000 ಮೊತ್ತವನ್ನು ಕಿಡ್ನಿ ವೈಫಲ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಸುಂದರ ಮೂಲ್ಯ ಪೆರ್ಲ ಅವರಿಗೆ ಮತ್ತು  ಕುಲಾಲ ಆಸರೆಯ 8 ನೇ ಸಹಾಯ ಹಸ್ತ ಯೋಜನೆ ರೂ. 15,000 ಮೊತ್ತವನ್ನು ಕಿಡ್ನಿ ವೈಫಲ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ದೇವದಾಸ್ ಮಂಜೇಶ್ವರ ಅಡ್ಕರವರಿಗೆ ಗಣ್ಯರ ಉಪಸ್ಥಿಯಲ್ಲಿ ಸ್ವಾಮೀಜಿರವರು  ಹಸ್ತಾಂತರಿಸಿದರು. ಸುಮಾರು 375 ಮಂದಿ ವಿದ್ಯಾರ್ಥಿಗಳಿಗೆ ಉಚಿತಪುಸ್ತಕ ವಿತರಿಸಲಾಯಿತು. 2024-25 ನೇ ಸಾಲಿನ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳಿಸಿರುವ ಕೇರಳ/ಕರ್ನಾಟಕದ ಎಸ್. ಎಸ್. ಎಲ್. ಸಿ ಯ 16 ಮಂದಿ ವಿದ್ಯಾರ್ಥಿಗಳಿಗೆ  ಹಾಗೂ ಪ್ಲಸ್ ಟು /ಪಿ. ಯು. ಸಿ ಯ 5 ಮಂದಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. 

ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ತರ್ ಕಬ್ಬಿನಹಿತ್ಲು ವಂದಿಸಿದರು. ಯನ್.ಕೆ. ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಮಹಾಸಭೆಯಲ್ಲಿ 2025-27 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ, ಉಪಾಧ್ಯಕ್ಷರಾಗಿ ರಾಮ ಉಜಿರೆ, ಪ್ರಧಾನ ಕಾರ್ಯದರ್ಶಿಯಾಗಿ ದಾಮೋದರ ಮಾಸ್ತರ್ ಕಬ್ಬಿನಹಿತ್ಲು, ಜೊತೆ ಕಾರ್ಯದರ್ಶಿಯಾಗಿ ಭೋಜ ಮಾಸ್ತರ್ ಪಾವೂರು, ಕೋಶಾಧಿಕಾರಿಯಾಗಿ ಈಶ್ವರ್ ಕುಲಾಲ್ ಕಣ್ವತೀರ್ಥ, ಕ್ರೀಡಾಕಾರ್ಯದರ್ಶಿಯಾಗಿ ತಾರನಾಥ ಕಣ್ವತೀರ್ಥ, ಸಂಘಟನಾ ಸಂಚಾಲಕರಾಗಿ ಸುಧೀರ್ ರಂಜನ್ ದೈಗೋಳಿ ಹಾಗೂ ಜಯಂತ ಚಿಪ್ಪಾರ್,  ಸೇವಾದಳಪತಿಗಳಾಗಿ ಪ್ರಸಾದ್ ತೂಮಿನಾಡು ಹಾಗೂ ಸುರೇಶ್ ಕಣ್ವತೀರ್ಥ, ಕಾನೂನು ಸಲಹಾ ಮಂಡಳಿ ಸದಸ್ಯರಾಗಿ ಸೋಮಪ್ಪ ಸಾಲ್ಯಾನ್ ಕುಂಜತ್ತೂರು, ಬಾಲಕೃಷ್ಣ ಮುನ್ನಿಪ್ಪಾಡಿ, ವಿಶ್ವನಾಥ ಮಾಣಿಪ್ಪಾಡಿ ಹಾಗೂ ಇತರ 21 ಮಂದಿ ಸದಸ್ಯರು ಕಾರ್ಯಕಾರಿ ಸಮಿತಿಗೆ ಆಯ್ಕೆಯಾದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries