ಕಜಂಪಾಡಿ ಸರ್ಕಾರಿ ಶಾಲೆ: 29ರಂದು ಶಿಕ್ಷಕ ಹುದ್ದೆಗೆ ಸಂದರ್ಶನ
ಪೆರ್ಲ: ಕಜಂಪಾಡಿ ಸರ್ಕಾರಿ ಅಭ್ಯುದಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ ಎಲ್ ಪಿಎಸ್ ಟಿ ಕನ್ನಡ ಶಿಕ್ಷಕ ಹುದ್ದೆಗೆ ದಿನವೇತನ ಆಧಾರದಲ್ಲಿ ನೇಮಕಾತಿಗೆ ಮೇ 29ರಂದು ಮಧ್ಯಾಹ್ನ 2.30ಕ್ಕೆ ಸಂದರ್ಶನ ನಡೆಯಲಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಅಸಲಿ ಪ್ರಮಾಣಪತ್ರಗಳೊಂದಿಗೆ ( ಟಿಟಿಸಿ, ಡಿಎಡ್, ಡಿ ಇ ಐ.ಎಡ್ ಕನ್ನಡ, ಟೆಟ್) ಶಾಲಾ ಕಚೇರಿಯಲ್ಲಿ ನಡೆಯುವ ಸಂದರ್ಶನದಲ್ಲಿ ಭಾಗವಹಿಸುವಂತೆ ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.
------------------------------------------
ಪಡ್ರೆ ಸರ್ಕಾರಿ ಶಾಲೆ: 30 ರಂದು ಶಿಕ್ಷಕ ಹುದ್ದೆಗೆ ಸಂದರ್ಶನ
ಪೆರ್ಲ: ಪಡ್ರೆ ವಾಣೀನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಹೈಸ್ಕೂಲ್ ವಿಭಾಗದಲ್ಲಿ ಎಚ್.ಎಸ್.ಟಿ.ಹಿಂದಿ ಮತ್ತು ಗಣಿತ ಕನ್ನಡ ಮಾಧ್ಯಮ ಶಿಕ್ಷಕ ಹುದ್ದೆಗಳಿಗೆ ದಿನವೇತನ ಆಧಾರದಲ್ಲಿ ನೇಮಕಾತಿಗೆ ಮೇ 30 ರಂದು ಬೆಳಗ್ಗೆ 10.30ಕ್ಕೆ ಸಂದರ್ಶನ ನಡೆಯಲಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಅಸಲಿ ಪ್ರಮಾಣಪತ್ರಗಳೊಂದಿಗೆ ಶಾಲಾ ಕಚೇರಿಯಲ್ಲಿ ನಡೆಯುವ ಸಂದರ್ಶನದಲ್ಲಿ ಭಾಗವಹಿಸುವಂತೆ ಮುಖ್ಯ ಶಿಕ್ಷಕರು ತಿಳಿಸಿದ್ದಾರೆ.
............................................................................................................................................
ಕಾಟುಕುಕ್ಕೆ: ದಿನವೇತನ ಆಧಾರದಲ್ಲಿ ಅಧ್ಯಾಪಕರ ನೇಮಕಾತಿ
ಪೆರ್ಲ: ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ಕಾಟುಕುಕ್ಕೆಯಲ್ಲಿ ಎಚ್ ಎಸ್ ಎಸ್ ಟಿ ಕನ್ನಡ, ಎಚ್ ಎಸ್ ಎಸ್ ಟಿ ಜೂನಿಯರ್ ಸಂಸ್ಕøತ ಹುದ್ದೆಗಳಿಗೆ ದಿನವೇತನ ಆಧಾರದಲ್ಲಿ ಅಧ್ಯಾಪಕರನ್ನು ನೇಮಿಸಲಾಗುತ್ತದೆ. ಅರ್ಹ ಆಸಕ್ತ ಅಭ್ಯರ್ಥಿಗಳು ತಮ್ಮ ಅಸಲಿ ಪ್ರಮಾಣಪತ್ರಗಳೊಂದಿಗೆ ಮೇ.30 ರಂದು ಬೆಳಗ್ಗೆ 10 ಕ್ಕೆ ಹೈಯರ್ ಸೆಕೆಂಡರಿ ಶಾಲಾ ಕಚೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲ ಪದ್ಮನಾಭ ಶೆಟ್ಟಿ 94951 45947 ಸಂಪರ್ಕಿಸಲು ಸೂಚಿಸಲಾಗಿದೆ.
........................................................................................................................................................................
ಬೇಕೂರು ಶಾಲೆಯಲ್ಲಿ ಅಧ್ಯಾಪಕ ಸಂದರ್ಶನ
ಉಪ್ಪಳ: ಬೇಕೂರು ಹೈಯರ್ ಸೆಕೆಂಡರಿ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಇಂಗ್ಲೀಷ್ ಸೀನಿಯರ್,ಭೌತಶಾಸ್ತ್ರ ಸೀನಿಯರ್, ರಸಾಯನ ಶಾಸ್ತ್ರ ಸೀನಿಯರ್, ಚರಿತ್ರೆ ಸೀನಿಯರ್, ಸಮಾಜ ಶಾಸ್ತ್ರ ಸೀನಿಯರ್,ರಾಜ್ಯ ಶಾಸ್ತ ್ರಸೀನಿಯರ್, ಮಲಯಾಳ ಜೂನಿಯರ್, ಪ್ರಾಣಿಶಾಸ್ತ್ರ ಜೂನಿಯರ್, ಉರ್ದು ಜೂನಿಯರ್, ಗಣಿತ ಜೂನಿಯರ್ ಅಧ್ಯಾಪಕ ಹುದ್ದೆಗಳಿಗೆ ದಿನ ವೇತನ ಆಧಾರದಲ್ಲಿ ಮೇ 29ರಂದು ಬೆಳಗ್ಗೆ 10.30 ಕ್ಕೆ ಪ್ರಾಂಶುಪಾಲರ ಕಚೇರಿಯಲ್ಲಿ ಸಂದರ್ಶನ ನಡೆಯಲಿರುವುದು. ಅರ್ಹ ಅಭ್ಯರ್ಥಿಗಳು ಅಸಲಿ ಪ್ರಮಾಣಪತ್ರದೊಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ ಪ್ರಕಟಣೆ ತಿಳಿಸಿದೆ.





