ಮಂಜೇಶ್ವರ: ಪಾವಳ ಸಂತೋಷ್ ಫ್ರೆಂಡ್ಸ್ ಕ್ಲಬ್ ನ ವಾರ್ಷಿಕ ಮಹಾ ಸಭೆ ಮಂಗಳವಾರ ಕ್ಲಬ್ಬಿನ ವಾರ್ಷಿಕ ಮಹಾಸಭೆ ನಡೆಯಿತು. ಸಭೆಯಲ್ಲಿ 2024-25ರ ವಾರ್ಷಿಕ ವರದಿಯನ್ನು ಮತ್ತು ಲೆಕ್ಕಪತ್ರವನ್ನು ಲಿಖಿತ್ ರಾಜ್ ಕೊಂದಲಕುಮೇರು ಮಂಡಿಸಿದರು. ಲೆಕ್ಕಪತ್ರವನ್ನು ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು. ನಂತರ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ನೂತನವಾಗಿ ಕಿಶೋರ್ ಕುಮಾರ್ ಪಾವಳ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಲೋಕೇಶ್ ಪಾವಳ, ಕೋಶಾಧಿಕಾರಿ ವಿಜಯ್ ಕುಮಾರ್ ಕೊಂದಲಕುಮೇರು, ಕಾರ್ಯದರ್ಶಿಯಾಗಿ ಲಿಖಿತ್ ರಾಜ್ ಕೊಂದಲಕುಮೇರು, ಜೊತೆ ಕಾರ್ಯದರ್ಶಿಯಾಗಿ ಚೇತನ್ ವರ್ಕಾಡಿ, ಸಾಂಸ್ಕøತಿಕ ಜವಾಬ್ದಾರಿ ಮೋಹನ್ ಕೂಟತ್ತಜೆ,
ಕ್ರೀಡಾ ಜವಾಬ್ದಾರಿ ಪ್ರಮೋದ್ ಪಾವಳ, ವಿತೇಶ್ ಪಾವಳ ಅವರಿಗೆ ನೀಡಲಾಯಿತು.
33 ನೇ ವರ್ಷದ ಮೊಸರು ಕುಡಿಕೆ ಮಹೋತ್ಸವದ ಪೂರ್ವಭಾವಿ ಸಭೆಯನ್ನು ಮುಂದಿನ ತಿಂಗಳು ಜೂ. 01 ನಡೆಸುವುದೆಂದು ತೀರ್ಮಾನಿಸಲಾಯಿತು.




-KISHORE%20KUMAR.jpg)
