ನವದೆಹಲಿ: ದೇಶದ ತಯಾರಿಕಾ ವಲಯದ ಪ್ರಗತಿಯು ಏಪ್ರಿಲ್ ತಿಂಗಳಲ್ಲಿ 10 ತಿಂಗಳ ಗರಿಷ್ಠ ಮಟ್ಟಕ್ಕೆ ದಾಖಲಾಗಿದೆ ಎಂದು ಎಸ್ ಆಯಂಡ್ ಪಿ ಗ್ಲೋಬಲ್ ಸಂಸ್ಥೆಯ ಮಾಸಿಕ ಸಮೀಕ್ಷೆ ವರದಿ ಶುಕ್ರವಾರ ತಿಳಿಸಿದೆ.
ಕಳೆದ ವರ್ಷದ ಜೂನ್ ಬಳಿಕ ಉತ್ಪಾದನೆಯಲ್ಲಿ ಅತಿಹೆಚ್ಚು ವೇಗ ಪಡೆದ ತಿಂಗಳು ಇದಾಗಿದೆ.
ಹೊಸ ಆರ್ಡರ್‌ಗಳ ಹೆಚ್ಚಳವು ಇದಕ್ಕೆ ನೆರವಾಗಿದೆ ಎಂದು ಹೇಳಿದೆ.
ಮಾರ್ಚ್‌ನಲ್ಲಿ ಸೂಚ್ಯಂಕವು 58.1 ದಾಖಲಾಗಿತ್ತು. ಏಪ್ರಿಲ್‌ನಲ್ಲಿ 58.2 ಆಗಿದೆ.
ಸೂಚ್ಯಂಕವು 50ರ ಮೇಲಿದ್ದರೆ ಬೆಳವಣಿಗೆಯು ಸದೃಢವಾಗಿದೆ ಎಂದರ್ಥ. 50ಕ್ಕಿಂತ ಕಡಿಮೆ ದಾಖಲಾಗಿದ್ದರೆ ಬೆಳವಣಿಗೆ ಕುಂಠಿತವಾಗಿದೆ ಎಂದು ಅರ್ಥೈಸಲಾಗುತ್ತದೆ.
ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳವಾಗಿದೆ. ಪ್ರಮುಖವಾಗಿ ಆಫ್ರಿಕಾ, ಏಷ್ಯಾ, ಯುರೋಪ್, ಪಶ್ಚಿಮ ಏಷ್ಯಾ ಮತ್ತು ಅಮೆರಿಕದಿಂದ ಹೊಸ ಆರ್ಡರ್‌ಗಳ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ ತಯಾರಿಕಾ ವಲಯದ ಪ್ರಗತಿ ಏರಿಕೆ ಕಂಡಿದೆ ಎಂದು ವರದಿ ತಿಳಿಸಿದೆ.




