ಇತ್ತೀಚಿನ ಅಭಿವೃದ್ಧಿಗೊಂಡಿರುವ ಅಥವಾ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞನದಿಂದ ಎಷ್ಟು ಅನುಕೂಲಗಳಿವೆ ಅಷ್ಟೇ ಅನಾನುಕೂಲಗಳಾಗಿವೆ. ಯಾಕೆಂದ್ರೆ ಅಧುನಿಕ ಪ್ರಪಂಚದ್ಯಾಂತ ಪೊಲೀಸರು ಅದೇಷ್ಟೆ ಕಟ್ಟುನಿಟ್ಟಿನ ಕಾನೂನಿನ ಕ್ರಮ ಕೈಗೊಂಡು ಪತ್ತೆ ಹಚ್ಚಲಾರದಂತ ಸೈಬರ್ದಾಳಿಗಳು ಅಧಿಕವಾಗುತ್ತಿದೆ.ಇದೀಗ ಇದೇ ರೀತಿಯ ಬೆದರಿಕೆ ಎದುರಾಗಿದೆ.
ಈ ಮೊದಲು ಕಂಪ್ಯೂಟರ್, ಮೊಬೈಲ್ ಹಾಗೂ ಲ್ಯಾಪ್ಟ್ಯಾಪ್ಗಳಂತಹ ಸಾಧನಗಳನ್ನು ಹ್ಯಾಕ್ ಮಾಡುತ್ತಿದ್ದರು. ಆದರೆ,ಇದೀಗ ಗಂಭೀರ ವಿಷಯ ಏನೆಂದರೆ,ಮಾನವನ ಡಿಯೋಕ್ಸಿರೈಬೊನ್ಯೂಕ್ಲಿಯಿಕ್ ಆಮ್ಲ(DNA) ಡಿಎನ್‌ಎ ಅನ್ನು ಸಹ ಹ್ಯಾಕ್ ಮಾಡುತ್ತಿದ್ದಾರೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಹೌದು, ಕ್ಯಾನ್ಸರ್ ಪತ್ತೆ, ರೋಗ ಚಿಕಿತ್ಸೆ, ಸೋಂಕು ಮೇಲ್ವಿಚಾರಣೆ ಮತ್ತು ವೈಯಕ್ತಿಕಗೊಳಿಸಿದ ಔಷಧದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಡಿಎನ್‌ಎ ಪರೀಕ್ಷೆಗೆ ಬಳಸಲಾಗುವ ಅತ್ಯಾಧುನಿಕ ತಂತ್ರಜ್ಞಾನವಾದ ನೆಕ್ಸ್ಟ್-ಜನರೇಷನ್ ಸೀಕ್ವೆನ್ಸಿಂಗ್ (ಎನ್‌ಜಿಎಸ್) ಈಗ ಸೈಬರ್ ಅಪರಾಧಿಗಳಿಗೆ ಬೆದರಿಕೆಯ ಹೊಸ ಬಾಗಿಲನ್ನು ತೆರೆಯುತ್ತಿದೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.

ಸಂಶೋಧನೆಯಲ್ಲಿ ಬಹಿರಂಗಗೊಂಡಿದ್ದೇನು..?
IEEE ಆಕ್ಸೆಸ್ ಎಂಬ ಜನರಲ್ನಲ್ಲಿ ಇತ್ತೀಚಿಗೆ ಪ್ರಕಟವಾದ ಸಂಶೋಧನಾ ಪ್ರಕಾರ, NGS ತಂತ್ರಜ್ಞಾನವನ್ನು ಸಂಪೂರ್ಣವಾಗಿ ಸುರಕ್ಷಿತಗೊಳಿಸದಿದ್ರೆ, ಅದು, ವೈಯಕ್ತಿಕ ಮಾಹಿತಿ ಉಲ್ಲಂಘನೆ, ಜೈವಿಕ ಬೆದರಿಕೆ ಹಾಗೂ ಡೇಟಾ ಕಳ್ಳತನದಂತಹ ಗಭೀರ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಹೇಳಿದೆ. ಅಲ್ಲದೆ, ಪೋರ್ಟ್ಸ್ಮೌತ್ ವಿಶ್ವವಿದ್ಯಾಲಯದ ಕಂಪ್ಯೂಟಿಂಗ್ ವಿಭಾಗದ ಡಾ.ನಸ್ರೀನ್ ಅಂಜುಮ್ ನೇತೃತ್ವದ NGS ಪ್ರತಿಯೊಂದು ಹಂತದಲ್ಲಿಯೂ ಸೈಬರ್-ಜೈವಿಕ ಸುರಕ್ಷತಾ ದುರ್ಬಲತೆಗಳನ್ನು ಮೌಲ್ಯಮಾಪನ ಮಾಡುವ ಮೊದಲ ಸಮಗ್ರ ಅಧ್ಯಯನ ಇದಾಗಿದೆ.

NGS ಪ್ರಕ್ರಿಯೆ ಎಂದರೇನು?
ಮಾಹಿತಿಯ ಪ್ರಕಾರ, NGS ಪ್ರಕ್ರಿಯೆಯು ಸಂಕೀರ್ಣವಾಗಿದ್ದು, ಮಾದರಿ(ಸ್ಯಾಂಪಲ್ಸ್) ತಯಾರಿಕೆಯಿಂದ ದತ್ತಾಂಶ ವಿಶ್ಲೇಷಣೆಯವರೆಗೆ ಅನೇಕ ಹೈಟೆಕ್ ಉಪಕರಣಗಳು ಮತ್ತು ಸಾಫ್ಟ್‌ವೇರ್‌ಗಳನ್ನು ಬಳಸುವ ಹಲವು ತಾಂತ್ರಿಕ ಹಂತಗಳಾಗಿ ವಿಂಗಡಿಸಲಾಗಿದೆ. ಈ ಎಲ್ಲಾ ಹಂತಗಳು ಒಂದಕ್ಕೊಂದು ಅವಲಂಬಿತವಾಗಿವೆ ಮತ್ತು ಇಲ್ಲಿಯೇ ಸೈಬರ್ ಬೆದರಿಕೆಗಳ ಸಾಧ್ಯತೆ ಉದ್ಭವಿಸುತ್ತದೆ. ಅನೇಕ ಡಿಎನ್‌ಎ ಡೇಟಾಬೇಸ್‌ಗಳು ಆನ್‌ಲೈನ್‌ನಲ್ಲಿ ಮುಕ್ತವಾಗಿ ಲಭ್ಯವಿರುವುದರಿಂದ, ಅವುಗಳನ್ನು ಕಣ್ಗಾವಲು, ತಿದ್ದುಪಡಿ ಅಥವಾ ಅಪಾಯಕಾರಿ ಜೈವಿಕ ಪ್ರಯೋಗಗಳಿಗಾಗಿ ದುರುಪಯೋಗಪಡಿಸಿಕೊಳ್ಳಬಹುದು ಎಂದು ಸಂಶೋಧಕರು ಭಯಪಡುತ್ತಾರೆ.




