ಕಾಸರಗೋಡು: ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರ ಮತ್ತು ಲೀಗಲ್ ಮೆಟ್ರಲಜಿ ಖಾತೆ ಸಚಿವ ಜಿ.ಆರ್. ಅನಿಲ್ ಮತ್ತು ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಮೇ 26ರಂದು ಕಾಸರಗೋಡಿನ ವಿವಿಧೆಡೆ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಮಧ್ಯಾಹ್ನ 3.30ಕ್ಕೆ ಪನಾಯಾಲ್ ಬಟ್ಟತ್ತೂರಿನಲ್ಲಿ ಕಾಸರಗೋಡು ಸೆಕೆಂಡರಿ ಸ್ಟ್ಯಾಂಡರ್ಡ್ ಲ್ಯಾಬೋರೇಟರಿ ಕಟ್ಟಡವನ್ನು ಸಚಿವ ಜಿ.ಆರ್. ಅನಿಲ್ ಉದ್ಘಾಟಿಸುವರು. ಸಂಜೆ 4ಕ್ಕೆ ಮಲಕಲ್ಲು ಉಪ ಖಜಾನೆ ಕಟ್ಟಡದ ಶಿಲಾನ್ಯಾಸ ಮತ್ತು ಸಂಜೆ 5.30 ಕ್ಕೆ ಹೊಸದುರ್ಗ ಉಪ ಖಜಾನೆ ಕಟ್ಟಡದ ಶಿಲಾನ್ಯಾಸ ಸಮಾರಂಭವನ್ನು ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ನೆರವೇರಿಸುವರು.





