ಜಮ್ಮು: ಕತ್ತಲೆಯ ಮರೆಯಲ್ಲಿ ಜಮ್ಮುವಿನ ವಸತಿ ಪ್ರದೇಶಗಳ ಮೇಲೆ ಪಾಕಿಸ್ತಾನದ ಡ್ರೋನ್ ದಾಳಿ ಮತ್ತೆ ಇದೀಗ ಆರಂಭಿಸಿರುವುದು ತಿಳಿದುಬಂದಿದೆ.
ನಗರ ಸಂಪೂರ್ಣ ಕತ್ತಲೆಯಲ್ಲಿದೆ. ನಗರದ ವಿವಿಧ ಭಾಗಗಳಲ್ಲಿ ಸ್ಫೋಟಗಳ ಶಬ್ದವೂ ಕೇಳಿಬಂದಿದೆ. ತುರ್ತು ಸೈರನ್ ಕೂಡ ಮೊಳಗುತ್ತಿದೆ. ಹತ್ತಕ್ಕಿಂತ ಹೆಚ್ಚು ಕಡೆಗಳಲ್ಲಿ ಡ್ರೋನ್ ಆಕ್ರಮಣ ಅತ್ತಲಿಂದ ಬಂದರೂ ಒಂದನ್ನೂ ನೆಲಕ್ಕಚ್ಚಲು ಬಿಡದೆ ಮಾರ್ಗ ಮಧ್ಯೆ ಬಾರತೀಯ ಸೇನೆ ಹೊಡೆದುರುಳಿಸಿದೆ.ಇಲ್ಲಿಯವರೆಗೆ ವಾಯು ರಕ್ಷಣಾ ಪಡೆಗಳು ಡ್ರೋನ್‌ಗಳನ್ನು ನಾಶಪಡಿಸಿವೆ. ಇದರೊಂದಿಗೆ, ಪೂಂಚ್, ಕುಪ್ವಾರಾ ಮತ್ತು ಉರಿಯಲ್ಲಿ ಭಾರೀ ಶೆಲ್ ದಾಳಿ ನಡೆಸುವ ಮೂಲಕ ಪಾಕಿಸ್ತಾನ ಪ್ರಚೋದನೆಯನ್ನು ಸೃಷ್ಟಿಸುತ್ತಿದೆ. ನಿನ್ನೆ ಅದೇ ಸಮಯದಲ್ಲಿ, ಪಾಕಿಸ್ತಾನವು ಭಾರತದ ವಿವಿಧ ಗುರಿಗಳ ಮೇಲೆ ವ್ಯಾಪಕ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸಿತು. ಭಾರತದ ಸೇನಾ ನೆಲೆಗಳು, ವಾಯುನೆಲೆಗಳು, ವಸತಿ ಪ್ರದೇಶಗಳು ಮತ್ತು ಪೂಜಾ ಸ್ಥಳಗಳ ಮೇಲೆ
ಅವರು ಗುರಿ ಇಟ್ಟರು. ಪಾಕಿಸ್ತಾನದ ಡ್ರೋನ್ ದಾಳಿಯಿಂದ ಪೂಂಚ್‌ನಲ್ಲಿರುವ ಗುರುದ್ವಾರ ನಾಶವಾಯಿತು. ಇದನ್ನು ಭಾರತೀಯ ಸೇನೆ ದೃಢಪಡಿಸಿದೆ. ಆದರೆ ಭಾರತ ಗುರುದ್ವಾರವನ್ನು ನಾಶಮಾಡಿದೆ ಎಂದು ಪಾಕಿಸ್ತಾನ ಹೇಳಿಕೊಂಡಿತ್ತು.




