HEALTH TIPS

Digital Attack: ಕುತಂತ್ರಿ ಪಾಕ್‌ನಿಂದ ಡಿಜಿಟಲ್ ಯುದ್ಧ! ನಿಮ್ಮ ವಾಟ್ಸಾಪ್, ಫೇಸ್‌ಬುಕ್, ಟೆಲಿಗ್ರಾಮ್ ಸೈಬರ್ ದಾಳಿಯ ಅಪಾಯದಲ್ಲಿ? ಸುರಕ್ಷಿತವಾಗಿರುವುದು ಹೇಗೆ?

ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ (War between India and Pakistan) ಜೋರಾಗಿದೆ. ಪಾಪಿ ಪಾಕಿ ಭಾರತದ ವಿರುದ್ಧ ಕಾಲು ಕೆರೆದುಕೊಂಡು ಬಂದು ಭಾರತದ ನಾಗರೀಕರ ಮೇಲೆ ದಾಳಿ ಮಾಡಲು ಮುಂದಾಗಿದ್ದು, ಇದಕ್ಕೆ ಭಾರತ ತನ್ನದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದೆ.

ಈ ನಡುವೆ ಕುತಂತ್ರಿ ಪಾಕಿಸ್ತಾನ ಭಾರತದಲ್ಲಿ ಡಿಜಿಟಲ್‌ ಯುದ್ಧ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ. ಹೌದು, ಭಾರತ-ಪಾಕಿಸ್ತಾನ ಉದ್ವಿಗ್ನತೆಗಳು ಈಗ ಡಿಜಿಟಲ್ ವಿಭಾಗಕ್ಕೆ (Digital division)ವಿಸ್ತರಣೆ ಆಗುತ್ತಿದೆ. ಪಾಕಿಸ್ತಾನ ಮೂಲದ ಹ್ಯಾಕರ್‌ಗಳು ಭಾರತದ ಡಿಜಿಟಲ್‌ ವಿಭಾಗಕ್ಕೆ ಕಾಲಿಡಲು ಮುಂದಾಗಿದ್ದಾರೆ. ಎರಡು ದೇಶಗಳ ನಡುವಿನ ಪರಿಸ್ಥಿತಿ ಹೆಚ್ಚು ಉದ್ವಿಗ್ನವಾಗುತ್ತಿದ್ದಂತೆ, ಭಾರತೀಯ ನಾಗರಿಕರು, ವ್ಯವಹಾರಗಳು ಮತ್ತು ವಿಶೇಷವಾಗಿ ಬ್ಯಾಂಕಿಂಗ್ ಮತ್ತು ಹಣಕಾಸು ಮುಂತಾದ ಪ್ರಮುಖ ವಲಯಗಳು ಫಿಶಿಂಗ್, ಮಾಲ್‌ವೇರ್ ಮತ್ತು ಡೇಟಾ ಉಲ್ಲಂಘನೆಯಂತಹ ಹೆಚ್ಚಿನ ಆನ್‌ಲೈನ್ ಬೆದರಿಕೆಗಳನ್ನು ಎದುರಿಸುತ್ತಿವೆ. ಈ ನಡುವೆ CERT-In ನಿಂದ ಎಚ್ಚರಿಕೆಯನ್ನು ನೀಡಲಾಗಿದೆ. ಇಷ್ಟೇ ಅಲ್ಲದೆ ಆಯಾ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆಯೂ ಸಹ ಸೂಚಿಸಲಾಗಿದೆ. ಜೊತೆಗೆ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (BSE) ಎಚ್ಚರಿಕೆಯನ್ನು ನೀಡಿದ್ದು, ಮಾರುಕಟ್ಟೆ ಭಾಗವಹಿಸುವವರು ಹೆಚ್ಚುವರಿ ಜಾಗರೂಕರಾಗಿರಲು ತಿಳಿಸಿದೆ. ಅಧಿಕಾರಿಗಳ ಪ್ರಕಾರ, ಪಾಕಿಸ್ತಾನ ಹ್ಯಾಕರ್‌ಗಳು ಸೂಕ್ಷ್ಮ ಮಾಹಿತಿ ಮತ್ತು ಹಣಕಾಸಿನ ಡೇಟಾದ ಒಳಗೆ ನುಸುಳುವ ಪ್ರಯತ್ನ ಮಾಡುತ್ತಿದ್ದಾರೆ ಎರಂದು ತಿಳಿದುಬಂದಿದೆ. ಕೆಟ್ಟ ಉದ್ದೇಶ ಹೊಂದಿರುವ ಪಾಕಿಸ್ತಾನದ ಹ್ಯಾಕರ್‌ಗಳು ಮಾಲ್‌ವೇರ್ ಅನ್ನು ವಾಟ್ಸಾಪ್‌, ಇಮೇಲ್, ಪೇಸ್‌ಬುಕ್‌ ಮತ್ತು ಟೆಲಿಗ್ರಾಮ್‌ ನಂತಹ ಪ್ಲಾಟ್‌ಫಾರ್ಮ್‌ ಬಳಕೆ ಮಾಡಿಕೊಂಡು ದಾಳಿ ಮಾಡುತ್ತಿದ್ದಾರೆ. ಇದಲ್ಲದೆ, ಭಾರತೀಯ ಬ್ಯಾಂಕುಗಳು ತಮ್ಮ ಸೈಬರ್ ಭದ್ರತಾ ಚೌಕಟ್ಟುಗಳನ್ನು ಬಲಪಡಿಸಿವೆ ಮತ್ತು ಗಡಿ ಪ್ರದೇಶಗಳ ಸಮೀಪವಿರುವ ಶಾಖೆಗಳಲ್ಲಿ ಭದ್ರತೆಯನ್ನು ಬಲಪಡಿಸಿವೆ.

ಡ್ಯಾನ್ಸ್ ಆಫ್ ದಿ ಹಿಲರಿ

ಭಾರತೀಯ ರಕ್ಷಣಾ ವೆಬ್‌ಸೈಟ್‌ಗಳ ಮೇಲಿನ ಸೈಬರ್ ದಾಳಿಗಳು ಸೇರಿದಂತೆ ಆತಂಕಕಾರಿ ಘಟನೆಗಳು ಬೆದರಿಕೆಯನ್ನು ಇನ್ನಷ್ಟು ಹೆಚ್ಚಿಗೆ ಮಾಡಿವೆ. "ಡ್ಯಾನ್ಸ್ ಆಫ್ ದಿ ಹಿಲರಿ" ವೈರಸ್ ಎಂದು ಗುರುತಿಸಲಾದ ಒಂದು ಮಾಲ್‌ವೇರ್ ಅನ್ನು ವಿಡಿಯೋ ಫೈಲ್‌ಗಳು ಅಥವಾ ದಾಖಲೆಗಳ ರೂಪದಲ್ಲಿ ಶೇರ್‌ ಮಾಡಲಾಗುತ್ತಿದೆ. ಈ ಡಿಜಿಟಲ್ ಯುದ್ಧವು ತೀವ್ರಗೊಳ್ಳುತ್ತಿದ್ದಂತೆ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಡೇಟಾವನ್ನು ರಕ್ಷಿಸಲು ನೀವು ತೆಗೆದುಕೊಳ್ಳಬೇಕಾದ 5 ಮಾರ್ಗಗಳು ಇಲ್ಲಿವೆ.

ಬಲವಾದ ಪಾಸ್‌ವರ್ಡ್‌ಗಳನ್ನು ಬಳಕೆ ಮಾಡಿ

ನಿಮ್ಮ ಪಾಸ್‌ವರ್ಡ್‌ಗಳು ಪ್ರಬಲವಾಗಿವೆ ಎಂದು ಖಚಿತಪಡಿಸಿಕೊಳ್ಳಿ. ಅಕ್ಷರಗಳು, ಸಂಖ್ಯೆಗಳು ಮತ್ತು ಚಿಹ್ನೆಗಳ ಮಿಶ್ರಣವನ್ನು ಬಳಕೆ ಮಾಡಿ. ಎಲ್ಲದಕ್ಕೂ ಒಂದೇ ಪಾಸ್‌ವರ್ಡ್ ಅನ್ನು ಬಳಕೆ ಮಾಡಬೇಡಿ. ಅವುಗಳನ್ನು ನೆನಪಿಟ್ಟುಕೊಳ್ಳಲು ನಿಮಗೆ ಸಹಾಯ ಮಾಡಲು ಪಾಸ್‌ವರ್ಡ್ ಮ್ಯಾನೆಜರ್‌ ಅನ್ನು ಬಳಸಲು ಪ್ರಯತ್ನಿಸಿ.

ಎರಡು-ಹಂತದ ಪರಿಶೀಲನೆ (2FA) ಆನ್ ಮಾಡಿ

ಇನ್ನು 2FA ಆನ್ ಮಾಡುವ ಮೂಲಕ ನಿಮ್ಮ ಖಾತೆಗಳಿಗೆ ಹೆಚ್ಚುವರಿ ಭದ್ರತೆಯ ಲೇಯರ್‌ ಅನ್ನು ಸೇರಿಸಿ. ಇದರರ್ಥ ಯಾರಿಗಾದರೂ ನಿಮ್ಮ ಪಾಸ್‌ವರ್ಡ್ ತಿಳಿದಿದ್ದರೂ ಸಹ, ನಿಮ್ಮ ಫೋನ್ ಅಥವಾ ಇಮೇಲ್‌ಗೆ ವಿಶೇಷ ಕೋಡ್ ಕಳುಹಿಸದೆ ಅವರು ಲಾಗಿನ್ ಆಗಲು ಸಾಧ್ಯ ಆಗುವುದಿಲ್ಲ.

ಅಪ್‌ಡೇಟ್‌ ಮಾಡುತ್ತಲೇ ಇರಿ

ನಿಮ್ಮ ಫೋನ್, ಕಂಪ್ಯೂಟರ್, ಆಪ್‌ಗಳು ಮತ್ತು ಆಂಟಿವೈರಸ್ ಸಾಫ್ಟ್‌ವೇರ್ ಅನ್ನು ನಿಯಮಿತವಾಗಿ ಅಪ್‌ಡೇಟ್‌ ಮಾಡುತ್ತಲೇ ಇರಿ. ನವೀಕರಣಗಳು ಹ್ಯಾಕರ್‌ಗಳು ಪ್ರವೇಶಿಸಲು ಬಳಸಬಹುದಾದ ದುರ್ಬಲ ಫೈಲ್‌ಗಳನ್ನು ಸರಿಪಡಿಸುತ್ತವೆ.

ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ

ಇನ್ನು ನಿಮಗೆ ವಿಚಿತ್ರ ಇಮೇಲ್ ಅಥವಾ ಸಂದೇಶ ಬಂದರೆ, ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ. ನಿಮ್ಮ ಮಾಹಿತಿಯನ್ನು ನೀಡುವಂತೆ ನಿಮ್ಮನ್ನು ಮೋಸಗೊಳಿಸಲು ಹ್ಯಾಕರ್‌ಗಳು ಆಗಾಗ್ಗೆ ನಕಲಿ ಇಮೇಲ್‌ಗಳನ್ನು ಕಳುಹಿಸುತ್ತಲೇ ಇರುತ್ತಾರೆ.

ಫೈಲ್‌ಗಳನ್ನು ಬ್ಯಾಕಪ್ ಮಾಡಿ

ನಿಮ್ಮ ಪ್ರಮುಖ ಫೈಲ್‌ಗಳನ್ನು ಕ್ಲೌಡ್ ಸೇವೆ ಅಥವಾ ಬಾಹ್ಯ ಡ್ರೈವ್‌ಗೆ ಸೇವ್‌ ಮಾಡಿ. ನಿಮ್ಮ ಡಿವೈಸ್‌ ಹ್ಯಾಕ್ ಆಗಿದ್ದರೆ ಅಥವಾ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೆ, ನೀವು ನಿಮ್ಮ ಡೇಟಾವನ್ನು ಕಳೆದುಕೊಳ್ಳುವುದಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries