ಪತ್ತನಂತಿಟ್ಟ: ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18 ಹಾಗೂ 19ರಂದು ಶಬರಿಮಲೆ ಶ್ರೀ ಅಯ್ಯಪ್ಪ ದೇಗುಲ ದರ್ಶನ ಪಡೆಯಲಿರುವ ಹಿನ್ನೆಲೆಯಲ್ಲಿ ಪಂಪಾದಿಂದ ಸನ್ನಿದಾನಕ್ಕೆ ತೆರಳುವ ಪರಂಪರಗದ ಹಾದಿ ಹಾಗೂ ಶ್ರೀ ಅಯ್ಯಪ್ಪನ್ ರಸ್ತೆಯಲ್ಲಿ ಸಿದ್ಧತೆ ಆರಂಭಿಸಲಾಗಿದೆ.
ಹವಾಮಾನ ಹಾಗೂ ವಿಶ್ರಾಂತಿ ಸಔಕರ್ಯ ಪರಿಗಣಿಸಿ ಪರಂಪರಾಗತ ಹದಿಯ ಮೂಲಕ ಮಲೆ ಮೆಟ್ಟಿ ಸಾಗುವುದು ಸೂಕ್ತ ಎಂಬುದಾಗಿ ರಾಷ್ಟ್ರಪತಿಯ ಭದ್ರತಾ ಹೊಣೆಗಾರಿಕೆಯುಳ್ಳ ಎಸ್.ಪಿ.ಜಿ ತಂಡಕ್ಕೆ ಕೇರಳ ಪೊಲೀಸರು ಸೂಚಿಸಿದ್ದಾರೆ. ತುರ್ತು ಸಏವೆ ನೆಲೆಯಲ್ಲಿ ಸ್ವಾಮಿ ಅಯ್ಯಪ್ಪನ್ ಮಾರ್ಗದಲ್ಲಿ ಎಮರ್ಜೆನ್ಸಿ ಆಂಬುಲೆನ್ಸ್ ಸೇವೆಯನ್ನೂ ಏರ್ಪಡಿಸಲಾಗುವುದು. ಪಂಪಾದಿಂದ ಯಾವ ಹಾದಿಯಾಗಿ ರಷ್ಟ್ರಪತಿ ಸನ್ನಿಧಾನ ತಲುಪಲಿದ್ದಾರೆ ಎಂಬ ಬಗ್ಗೆ ಎಸ್.ಪಿ.ಜಿ ತಂಡ ಪರಿಶೀಲನೆ ನಡೆಸಿದ ಬಳಿಕ ತೀಮಾನಿÂಸಲಿದೆ,
ರಾಷ್ಟ್ರಪತಿ ಪಾರಂಪರಿಕ ಹಾದಿ ಮೂಲಕ ಬೆಟ್ಟ ಏರಿ ಸನ್ನಿಧಾನ ತಲುಪುವ ಇಚ್ಛೆ ವ್ಯಕ್ತಪಡಿಸಿ, ನಡೆದು ಏರಲು ಸಾಧ್ಯವಾಗದಿದ್ದಲ್ಲಿ, ಇದಕ್ಕಾಗಿ ನಾಲ್ಕು ಡೋಲಿಗಳನ್ನು ಸಜ್ಜುಗೊಳಿಸುವುದರ ಜತೆಗೆ ಡೋಲಿ ಹೊರಲು ವಿಶೇಷ ಪರಿಣತಿ ಪಡೆದ 16ಮಂದಿಯನ್ನು ನೇಮಿಸಲೂ ತೀರ್ಮಾನಿಸಲಾಗಿದೆ.





