ಕಾಸರಗೋಡು: ನಿತ್ಯೋಪಯೋಗಿ ಸಾಮಗ್ರಿ, ಇಂಧನ, ಬಿಡಿಭಾಗ ಬೆಲೆಯೇರಿಕೆ ಆರ್‍ಟಿಓ ಕಚೇರಿಗಳಲ್ಲಿನ ಶುಲ್ಕದಲ್ಲಿನ ಹೆಚ್ಚಳದ ಹಿನ್ನೆಲೆಯಲ್ಲಿ ಆಟೋರಿಕ್ಷಾ ಬಾಡಿಗೆ ದರ ತಕ್ಷಣ ಹೆಚ್ಚಳಗೊಳಿಸುವಂತೆ ಮುಳ್ಳೇರಿಯಾದಲ್ಲಿ ಆಯೋಜಿಸಲಾದ ಆಟೋರಿಕ್ಷಾ ಮಜ್ದೂರ್ ಸಂಘ(ಬಿಎಂಎಸ್)ಪ್ರತಿನಿಧಿ ಸಮ್ಮೇಳನ ಸರ್ಕರವನ್ನು ಆಗ್ರಹಿಸಿದೆ. ಕಳೆದ ಮೂರು ವರ್ಷಗಳಿಂದ ಬಾಡಿಗೆದರ ಹೆಚ್ಚಿಸದೆ ಆಟೋರಿಕ್ಷಾ ಮಾಲಿಕರು ಸಂಕಷ್ಟ ಅನುಭವಿಸುತ್ತಿದ್ದರೆ. ಈ ಬಗ್ಗೆ ಸರ್ಕಾರ ತುರ್ತು ಗಮನ ಹರಿಸುವಂತೆಯೂ ಒತ್ತಾಯಿಸಲಾಯಿತು.
ಮುಳ್ಳೇರಿಯಾ ಗಣೇಶ ಕಲಾಮಂದಿರದಲ್ಲಿ ನಡೆದ ಆಟೋರಿಕ್ಷಾ ಮಜ್ದೂರ್ ಸಂಘ (ಬಿಎಂಎಸ್) ಕಾಸರಗೋಡು ಜಿಲ್ಲಾ ಪ್ರತಿನಿಧಿ ಸಮ್ಮೇಳನವನ್ನು ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ವಿಶ್ವನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಜಿಲ್ಲಾ ಜತೆ ಕಾರ್ಯದರ್ಶಿ ಲೀಲಾಕೃಷ್ಣನ್ ಮತ್ತು ಮುಳ್ಳೇರಿಯಾ ಪ್ರದೇಶ ಸಮಿತಿ ಅಧ್ಯಕ್ಷ ಆನಂದನ್ ಸಿಎಚ್ ಉಪಸ್ಥಿತರಿದ್ದರು.
ಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭರತನ್ ಕಲ್ಯಾಣ್ ರಸ್ತೆ ವರದಿ ಮಂಡಿಸಿದರು.ಉಪಾಧ್ಯಕ್ಷೆ ಗೀತಾ ಬಾಲಕೃಷ್ಣನ್ ಅವರು ಪದಾಧಿಕಾರಿಗಳನ್ನು ಘೋಷಿಸಿದರು. ಬಿಎಂಎಸ್ ಜಿಲ್ಲಾ ಸಮಿತಿಯ ಸದಸ್ಯ ರಾಘವನ್ ಮುಳ್ಳೇರಿಯ ಸಮಾರೋಪ ಭಾಷಣ ಮಾಡಿದರು. ಕೋಶಾಧಿಕಾರಿ ಕುಞÂಕಣ್ಣನ್ ಆದಾಯ ಮತ್ತು ವೆಚ್ಚದ ಅಂಕಿಅಂಶಗಳನ್ನು ಮಂಡಿಸಿದರು. ಸದಾಶಿವನ್ ಮುಳ್ಳೇರಿಯ ಸ್ವಾಗತಿಸಿ, ಕುಂಜಿಕಣ್ಣನ್ ಆರಾಲಿಂಕೈ ವಂದಿಸಿದರು.
ನೂತನ ಪದಾಧಿಕಾರಿಗಳ ಅಯ್ಕೆ ನಡೆಯಿತು. ಶಿವರಾಮ ಪೆರ್ಲ ಅಧ್ಯಕ್ಷ, ಎ ಕೇಶವ, ಉಮೇಶ್ ಎಸ್.ಕೆ, ಗಿರೀಶ್ ಅಟ್ಟೆಂಗಾನಂ, ಸದಾಶಿವ ಮುಳ್ಳೇರಿಯ, ಕುಞÂಕಣ್ಣನ್ ಚಾತಂಗೈ, ಕುಞÂಕಣ್ಣನ್ ಅರಯಾಲಿನ್‍ಕೈ ಉಪಾಧ್ಯಕ್ಷರು. ಭರತನ್ ಕಲ್ಯಾಣ್‍ರೋಡ್ ಪ್ರಧಾನ ಕಾರ್ಯದರ್ಶಿ, ಮನೋಜ್ ಕಲ್ಯಾಣಂ, ರಾಗೇಶ್ ಕಾಞಂಗಾಡ್, ಮಿಥುನ್ ನೀಲೇಶ್ವರ, ಬೋಜರಾಜ್ ಕುಂಬಳೆ, ಭಾಸ್ಕರನ್ ಕಾಲಿಚ್ಚಾನಡ್ಕ, ಪ್ರಸಾದ್ ಪರವನಡ್ಕ ಜತೆ ಕಾರ್ಯದರ್ಶಿಗಳು ಹಾಗೂ ವಿಶ್ವನಾಥ ಶೆಟ್ಟಿ ಅವರನ್ನು ಕೋಶಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಯಿತು.




.jpg)
