ಮಂಜೇಶ್ವರ: ಪಾಕಿಸ್ತಾನವನ್ನು ನಾಶ ಮಾಡಲು ಭಾರತಕ್ಕೆ ಒಂದು ದಿನವೂ ಬೇಡ. ಆದರೆ ದೇಶದ ಒಳಗಿರುವ ದೇಶದ್ರೋಹಿಗಳನ್ನು ನಿಗ್ರಹ ಮಾಡಬೇಕಾದದ್ದು ದೇಶಪ್ರೇಮಿಗಳ ಕರ್ತವ್ಯ ಎಂದು ನಿವೃತ್ತ ಕಮಾಂಡರ್ ವಿಜಯ ಕುಮಾರ್ ಕಣ್ವತೀರ್ಥ ಹೇಳಿದರು
ಹೊಸಂಗಡಿಯಲ್ಲಿ ಬಿಜೆಪಿ ಮಂಡಲ ಸಮಿತಿ ಗುರುವಾರ ಹಮ್ಮಿಕೊಂಡ ಭಾರತ್ ಶೌರ್ಯ ತಿರಂಗ ಯಾತ್ರೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಿಜೆಪಿ ಮಾಜಿ ಜಿಲ್ಲಾ ಪ್ರ.ಕಾರ್ಯದರ್ಶಿ ವಿಜಯ್ ರೈ ಉದ್ಘಾಟಿಸಿದರು. ಆಧುನಿಕ ಜಗತ್ತಿನಲ್ಲಿ ನರೇಂದ್ರ ಮೋದಿ ನೇತೃತ್ವದ ಭಾರತ ಬಲಿಷ್ಠ ಸೈನಿಕ ಶಕ್ತಿಯನ್ನು ಹೊಂದಿದೆ. ಪಾಕಿಸ್ತಾನದ ಒಂದೇ ಒಂದು ಡ್ರೋನ್ ಗಳು ಭಾರತದ ಮಣ್ಣನ್ನು ಸ್ಪರ್ಶ ಮಾಡಲು ಸಾಧ್ಯವಾಗಿಲ್ಲ. ಆಪರೇಷನ್ ಸಿಂದೂರ್ ದೇಶದ ಸೈನಿಕ ಶಕ್ತಿಯನ್ನು ಜಗತ್ತಿಗೆ ತೋರಿಸಿದೆ. ಭಾರತದ ಆಯುಧಗಳಿಗೆ ಜಗತ್ತಿನ ವಿವಿಧ ದೇಶಗಳಿಂದ ಬೇಡಿಕೆ ಬಂದಿದೆ ಎಂದು ಅವರು ಹೇಳಿದರು.
ನ್ಯಾಯವಾದಿ. ನವೀನ್ ರಾಜ್ ಮಾತನಾಡಿ, ದೃಢ ನಿರ್ಧಾರದ ಪ್ರಧಾನಿ ಇದ್ದರಲ್ಲಿ ಶತ್ರುಗಳ ನಾಶಕ್ಕೆ ಆಪರೇಷನ್ ಸಿಂದೂರ ಉದಾಹರಣೆ ಎಂದು ಹೇಳಿದರು.
ಮುಖಂಡರಾದ ಎ.ಕೆ.ಕಯ್ಯಾರ ಪದ್ಮನಾಭ ಕಡಪ್ಪರ, ಯಾದವ ಬಡಾಜೆ, ಸದಾಶಿವ ಚೇರಾಲು, ಯತೀರಾಜ್ ಶೆಟ್ಟಿ, ತುಳಸಿ ಕುಮಾರಿ, ಆಶಾಲತಾ, ಸುಬ್ರಮಣ್ಯ ಭಟ್, ಸತ್ಯಶಂಕರ ಭಟ್, ಜಯರಾಮ ಕುಲಾಲ್, ಚಂದ್ರಹಾಸ ಶೆಟ್ಟಿ ಬೆಜ್ಜ, ಯಸ್ಪಾಲ್ ಮಂಜೇಶ್ವರ ನೇತೃತ್ವ ನೀಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ., ಸ್ವಾಗತಿಸಿ, ಕೆ.ವಿ. ರಾಧಾಕೃಷ್ಣ ಭಟ್ ವಂದಿಸಿದರು.







