ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘ (ರಿ) ಮಂಜೇಶ್ವರ, ತೂಮಿನಾಡು ಆಶ್ರಯದಲ್ಲಿ ಕಾಸರಗೋಡು ಜಿಲ್ಲಾ ಕುಲಾಲ ಸುಮುದಾಯ ಭವನದ ನೆಲ ಅಂತಸ್ತಿನಲ್ಲಿ ನಿರ್ಮಾಣಗೊಂಡಿರುವ ಮಿನಿ ಸಭಾಂಗಣದ ಉದ್ಘಾಟನೆ, ಸಮುದಾಯದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಉಚಿತ ಪುಸ್ತಕ ವಿತರಣೆ, 2024-25ನೇ ಸಾಲಿನ ಎಸ್. ಎಸ್. ಎಲ್. ಸಿ ಹಾಗೂ ಪ್ಲಸ್ ಟು /ಪಿ. ಯು. ಸಿ ಯ ಕರ್ನಾಟಕ ಕೇರಳ ಪರೀಕ್ಷೆ ಯಲ್ಲಿ ಅತ್ಯಧಿಕ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ, ಸಹಾಯಹಸ್ತ ವಿತರಣೆ ಮತ್ತು ಸಂಘದ ವಾರ್ಷಿಕ ಮಹಾಸಭೆ ಮೇ. 25 ರಂದು ಭಾನುವಾರ ಜರಗಲಿದೆ. ಬೆಳಗ್ಗೆ 8 ರಿಂದ ಗಣಹೋಮ, 8.45 ರಿಂದ ಅಡ್ಕ ಬಂಗೇರ ಮೂಲಸ್ಥಾನ ಭಜನಾ ಮಂಡಳಿ, ಬಾಲಾoಜನೇಯ ವ್ಯಾಯಾಮ ಶಾಲೆ ಭಜನಾ ತಂಡ, ಶ್ರೀ ಮಹಾಕಾಳಿ ಭಜನಾ ಮಂಡಳಿ ತೂಮಿನಾಡು ತಂಡಗಳಿಂದ ಭಜನೆ ಹಾಗೂ ನಂದಗೋಕುಲ ಭಜನಾ ತಂಡ ತೂಮಿನಾಡು ತಂಡದಿಂದ ಕುಣಿತ ಭಜನೆ ನಡೆಯಲಿದೆ. 10.30 ರಿಂದ ಸಭಾ ಕಾರ್ಯಕ್ರಮ ಆರಂಭ ನಡೆಯಲಿದ್ದು, ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ ಧಾಮ ಮಾಣಿಲ ಆಶೀರ್ವಚನ ನೀಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಶಿಧರ್ ಕೌಡಿಚಾರು ವಹಿಸಲಿದ್ದು, ಪ್ರೇಮಾನಂದ ಕುಲಾಲ್ ಸಭಾಂಗಣವನ್ನು ಉದ್ಘಾಟಿಸುವರು. ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ನ್ಯಾಯವಾದಿ ರವೀಂದ್ರ ಮುನ್ನಿಪ್ಪಾಡಿ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ವಿಠಲ್ ಕುಲಾಲ್, ದಿವಾಕರ ಮೂಲ್ಯ. ಗಣೇಶ್ ಕುಲಾಲ್, ಅನಿಲ್ ದಾಸ್, ಸಾವಿತ್ರಿ ಮಹಾಬಲ ಹಾಂಡ, ಕಮಲಾಕ್ಷೀ ವಿ.ಕುಲಾಲ್, ಜಯಂತಿ ಬದಿಯಡ್ಕ, ರಾಮಚಂದ್ರ ಬಡಾಜೆ, ಚಂದ್ರಶೇಖರ್ ಸಾಲ್ಯಾನ್, ಉಮೇಶ್ ಇಡಿಯಾಲ, ಮಾಲತಿ ಪಿ., ರಾಮ ಅಂಗಡಿಮಾರ್, ಜಯಪ್ರಕಾಶ್ ಕೈರಂಗಳ ಭಾಗವಹಿಸುವರು. ದಾಮೋದರ ಮಾಸ್ತರ್ ನೇತೃತ್ವ ವಹಿಸುವರು. ಕಾಸರಗೋಡು ಜಿಲ್ಲೆಯ ಕುಲಾಲ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಸಂಘದ ಪ್ರಕಟನೆಯಲ್ಲಿ ವಿನಂತಿಸಿದೆ.





