ಕಾಸರಗೋಡು: ಕೇರಳದಲ್ಲಿ ಕ್ಷೀರ ಕೃಷಿಕರಿಗೆ ಸಮಗ್ರ ವಿಮೆ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಕ್ಷೀರ ಅಭಿವೃದ್ಧಿ, ಮೃಗಸಂರಕ್ಷಣೆ ಖಾತೆ ಸಚಿವೆ ಜೆ.ಚಿಂಜುರಾಣಿ ಹೇಳಿದರು.
ಕ್ಷೀರ ಅಭಿವೃದ್ಧಿ ಯೂನಿಟ್ ಹಾಗು ಕ್ಷೀರ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಮಿಲ್ಮಾ, ಮೃಗಸಂರಕ್ಷಣೆ ಇಲಾಖೆ, ಕೇರಳ ಫೀಡ್ಸ್ ಎಂಬಿವುಗಳ ಸಹಕಾರದೊಂದಿಗೆ ಆಯೋಜಿಸಿದ ಕ್ಷೀರ ಕೃಷಿಕರ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ 35 ಸಹಕಾರಿ ಸಂಘಗಳಿಂದಾಗಿ 1250 ಮಂದಿ ಕೃಷಿಕರು ಸಂಗಮದಲ್ಲಿ ಭಾಗವಹಿಸಿದರು. ಸಂಗಮದ ಅಂಗವಾಗಿ ಡೈರಿ ಪ್ರದರ್ಶನ, ಕ್ಷೀರೋತ್ಪಾದನೆ ನಿರ್ಮಾಣ ಪ್ರದರ್ಶನ ಮೊದಲಾದವುಗಳನ್ನು ಆಯೋಜಿಸಲಾಗಿತ್ತು.
ಬ್ಲಾಕ್ ಪಂಚಾಯತಿ ಅಧ್ಯಕ್ಷ ಮಾಧವನ್ ಮಣಿಯರ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಕ್ಷೀರ ಅಭಿವೃದ್ಧಿ ಇಲಾಖೆ ಡೆಪ್ಯೂಟಿ ಡೈರೆಕ್ಟರ್ ಸಿಜೋನ್ ಜೋನ್ಸ್ ಕುನ್ನತ್ ವರದಿ ಮಂಡಿಸಿದರು. ಕೆಸಿಎಂಎಂಎಫ್ ಡೈರೆಕ್ಟರ್ ಪಿ.ನಾರಾಯಣನ್, ಎಂಆರ್‍ಸಿಎಂಪಿಯು ಡೈರೆಕ್ಟರ್ ಕೆ.ಸುಧಾಕರನ್, ವಿವಿಧ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಬ್ಲಾಕ್ ಪಂಚಾಯತಿ ಪ್ರತಿನಿಧಿಗಳು, ಜಿಲ್ಲಾ ಪಂಚಾಯತಿ ಸದಸ್ಯರು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು. ಸಾಧಕ ಕ್ಷೀರ ಕೃಷಿಕರನ್ನು ಸಮ್ಮಾನಿಸಲಾಯಿತು. ಕೆ.ಮಧುಸೂದನನ್ ಸ್ವಾಗತಿಸಿದರು. ಕೆ.ರಮ್ಯಾ ವಂದಿಸಿದರು.




.jpg)
