ಶ್ರೀನಗರ: ಮೇ 12ರ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಮುಂದುವರಿಯಲಿದೆ ಎಂದು ಸೇನಾ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಕದನ ವಿರಾಮ ಒಪ್ಪಂದ ಇಂದಿಗೆ ಕೊನೆಗೊಳ್ಳಲಿದೆ ಎಂಬ ವದಂತಿಯನ್ನು ತಳ್ಳಿಹಾಕಿದ ಅವರು, 'ಡಿಜಿಎಂಒಗಳ(ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರು) ಸಭೆಯಲ್ಲಿ ನಿರ್ಧರಿಸಿದಂತೆ ಕದನ ವಿರಾಮ ಮುಂದುವರೆಯುತ್ತದೆ.
ಕದನ ವಿರಾಮಕ್ಕೆ ಇಂತದ್ದೆ ಮುಕ್ತಾಯದ ದಿನ ಎಂಬುವುದು ಇಲ್ಲ' ಎಂದು ಅವರು ಹೇಳಿದರು. ಅಲ್ಲದೇ, ಭಾರತ ಮತ್ತು ಪಾಕಿಸ್ತಾನ ಡಿಜಿಎಂಒಗಳ ನಡುವೆ ಇಂದು ಯಾವುದೇ ಮಾತುಕತೆ ನಿಗದಿಯಾಗಿಲ್ಲ ಎಂದೂ ಹೇಳಿದರು.





