ಕಾಸರಗೋಡು: ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಧಿತನಾಗಿ, ಜಾಮೀನಿನಲ್ಲಿ ಬಿಡುಗಡೆಗೊಂಡ ನಂತರ ನ್ಯಾಯಾಲಯಕ್ಕೆ ಹಾಜರಗದೆ ತಲೆಮರೆಸಿಕೊಂಡಿದ್ದ ತಮಿಳ್ನಾಡು ನೀಲಗಿರಿ ನಿವಾಸಿ ಪಾರ್ತಿವನ್ ಅಲಿಯಾಸ್ ರಮೇಶ್(26)ಎಂಬಾತನನ್ನು ಎಂಟು ವರ್ಷಗಳ ಬಳಿಕ ಬಂಧಿಸಲಾಗಿದೆ.
ಈತ ನೀಲೇಶ್ವರ ಕರಿಂದಳದ ಎಸ್ಟೇಟ್ ಒಂದರಲ್ಲಿ ಮೇಲ್ನೋಟ ವಹಿಸಿಕೊಂಡಿದ್ದ ಕರಿಂದಳ ಚೂರಿಪಡ ನಿವಾಸಿ ಪಿ.ವಿ ಚಿಂಡನ್(58)ಎಂಬವರನ್ನು 2018 ಫೆ. 24ರಂದು ಕೊಲೆಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಎಸ್ಟೇಟ್ ಕಾರ್ಮಿಕರಿಗೆ ವೇತನ ನೀಡಲು ಚಿಂಡನ್ ಆಗಮಿಸಿದ್ದ ಸಂದರ್ಭ ಈತನ ಕೈಯಲ್ಲಿದ್ದ ಹಣಕ್ಕಾಗಿ ತಲೆಗೆ ಬಡಿದು ಕೊಲೆಗೈದಿರುವ ಬಗ್ಗೆ ನೀಲೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸುತ್ತಿದ್ದಂತೆ, ತಲೆಮರೆಸಿಕೊಂಡಿದ್ದ ಈತ ಕೊಯಂಬತ್ತೂರಿನ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಚಾಲಕನಾಗಿ ದುಡಿಯುತ್ತಿದ್ದನೆನ್ನಲಾಗಿದೆ.




