ಕಾಸರಗೋಡು: ಮಳೆಗಾಲದ ಸಿದ್ಧತೆ ನಿಟ್ಟಿನಲ್ಲಿ ಶಾಲಾ ವಾಹನಗಳ ತಪಾಸಣಾ ಕಾರ್ಯ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಆಯೋಜಿಸಲಾಗಿದೆ. ಪ್ರಾದೇಶಿಕ ಸಾರಿಗೆ ಇಲಾಖೆ ನೇತೃತ್ವದಲ್ಲಿ ಈ ತಪಾಸಣೆ ನಡೆಯಲಿರುವುದು.
ಕಾಸರಗೋಡು ತಾಲೂಕು ವ್ಯಾಪ್ತಿಯ ಶಾಲಾ ವಾಹನಗಳ ತಪಾಸಣೆ ಮೇ 21 ರಂದು ಕಾಸರಗೋಡು ನಗರಸಭಾ ಕ್ರೀಡಾಂಗಣ ಸನಿಹದ ಮೈದಾನದಲ್ಲಿ ನಡೆಸಲಾಗುವುದು ಮಂಜೇಶ್ವರಂ ತಾಲೂಕು ವ್ಯಪ್ತಿಯ ವಾಃನಗಳ ತಪಾಸಣೆ ಮೇ 24 ರಂದು ಬೆಳಿಗ್ಗೆ 9 ಗಂಟೆಯಿಂದ ಉಪ್ಪಳ ಎಜೆಐ ಶಾಲಾ ಮೈದಾನದಲ್ಲಿ ನಡೆಯಲಿರುವುದಾಗಿ ಕಾಸರಗೋಡು ಆರ್‍ಟಿಒ ಕಚೇರಿ ಪ್ರಕಟಣೆ ತಿಳಿಸಿದೆ. ಶಾಲಾ ತರಗತಿ ಪುನಾರಂಭಗೊಳ್ಳುವ ಮುಂಚಿತವಾಗಿ ಶಾಲಾ ವಾಹನಗಳ ದೃಢತೆ ಹಾಗೂ ಚಾಲಕರ ಕ್ಷಮತೆ ಬಗ್ಗೆ ಆರ್‍ಟಿಓ ಅಧಿಕಾರಿಗಳಿಂದ ತಪಾಸಣೆ ನಡೆಯುತ್ತದೆ.





