ಕಾಸರಗೋಡು: ಪಾಲಕುನ್ನು ಸನಿಹದ ಏರೋಳ್ ಮೊಟ್ಟಮ್ಮಾಳ್ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಪುನ:ಪ್ರತಿಷ್ಠಾ ಬ್ರಹ್ಮಕಲಶ, ಕಳಿಯಾಟ ಮಹೋತ್ಸವ ಸಂಪನ್ನಗೊಂಡಿತು.ಗಣಪತಿ ಹೋಮ, ಕಲಶ ಪ್ರತಿಷ್ಠೆ, ಕಲಾ ಹೋಮ, ಪೂರ್ಣಾಹುತಿ, ಹಾಗೂ ವಿಷ್ಣು ಮೂರ್ತಿ ದೈವದ ಪುನ: ಪ್ರತಿಷ್ಠಾಪನೆ ನೆರವೇರಿತು. ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ಶ್ರೀ ವಿಷ್ಣುಮೂರ್ತಿ ದೈವದ ನರ್ತನ ಸೇವೆ ನಡೆಯಿತು.
ಚಂದ್ರಾಪುರಂ ಅಯ್ಯಪ್ಪ ಭಜನಾ ಮಂದಿರ ಭಜನಾ ಸಮಿತಿ, ನಟ್ಟಕ್ಕಲ್ ಮಿತ್ರ ಭಜನಾ ತಂಡ, ನೆಲ್ಲಿಗಿತ್ತಂ ಶಾರದಾಂಬಾ ಭಜನಾ ಸಮಿತಿ, ಪಾಲಕ್ಕುನ್ನು ಭಗವತಿ ದೇವಸ್ಥಾನ, ಪಂಚಿಕೋಲ ಪಾರ್ಥಸಾರಥಿ ದೇವಸ್ಥಾನ ಸಮಿತಿ, ಶಾರದಾಂಬಾ ಭಜನಾ ಸಮಿತಿ ಹಾಗೂ ಬೇಡಕಂ ಧರ್ಮಶಾಸ್ತಾ ಭಜನಾ ಸಮಿತಿಯಿಂದ ಭಜನೆ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ ವೈವಿಧ್ಯ, ನಾಟಕ ಪ್ರದರ್ಶನಗೊಂಡಿತು.




