ಮುಳ್ಳೇರಿಯ: ದೇಲಂಪಾಡಿ ಗ್ರಾಮ ಪಂಚಾಯತಿಯ ಕಾಲನಿ ಕೇಂದ್ರೀಕರಿಸಿ ಅಲ್ಲಿಯ ಜನಾಂಗದ ಸಮಗ್ರ ಅಭಿವೃದ್ಧಿಗಾಗಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಯು ಜಾರಿಗೆ ತರುತ್ತಿರುವ ಅಂಬೇಡ್ಕರ್ ಕಾಲೋನಿ ಅಭಿವೃದ್ಧಿ ಯೋಜನೆಯಡಿಯಲ್ಲಿ ಕಣ್ಣಂಕೋಲ್ ಉನ್ನತಿ(ಕಾಲನಿ) ಒಂದು. ಯೋಜನೆಯ ಭಾಗವಾಗಿ ಅನುಷ್ಠಾನಗೊಳಿಸಲಾಗುತ್ತಿರುವ ಒಂದು ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾರ್ಯಗಳ ಆರಂಭಿಕ ಕೆಲಸವು ಕಣ್ಣಂಕೋಲ್ ಉನ್ನತಿಯಲ್ಲಿ ಶನಿವಾರ ಪ್ರಾರಂಭವಾಗಿದೆ. ಕಣ್ಣಂಕೋಲ್ ಒಂದು ಗಿರಿಧಾಮವಾಗಿದ್ದು, ಮಲವೆಟ್ಟು ಸಮುದಾಯಕ್ಕೆ ಸೇರಿದ 29 ಕುಟುಂಬಗಳಲ್ಲಿ ನೂರ ಹತ್ತು ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ, ಅವರ ಜೀವನ ಪರಿಸ್ಥಿತಿಗಳು ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪಾದ ಕೊರಗ ಸಮುದಾಯದಂತೆಯೇ ಇವೆ. ಈ ಅತ್ಯಂತ ಹಿಂದುಳಿದ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವ ಸಲುವಾಗಿ ಶಾಸಕ ಸಿ.ಎಚ್.ಕುಂಞಂಬು ಅವರ ಶಿಫಾರಸಿನ ಮೇರೆಗೆ 2024-25ನೇ ಸಾಲಿನ ಅಂಬೇಡ್ಕರ್ ವಸಾಹತು ಯೋಜನೆಗೆ ಉನ್ನತಿಯನ್ನು ಆಯ್ಕೆ ಮಾಡಲಾಯಿತು.
ಕಣ್ಣಂಕೋಲ್‍ನಲ್ಲಿ 1 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳಲ್ಲಿ 18 ವಸತಿ ರಹಿತ ಕುಟುಂಬಗಳಿಗೆ ಮನೆಗಳ ನಿರ್ಮಾಣ, ನಾಲ್ಕು ಮನೆಗಳ ನವೀಕರಣ, ಕುಡಿಯುವ ನೀರು ಮತ್ತು ಪಾದಚಾರಿ ಮಾರ್ಗ ಸೇರಿವೆ.
ಯೋಜನೆಯ ಅನುಷ್ಠಾನದ ಆರಂಭಿಕ ಹಂತವಾಗಿ, ಕಣ್ಣಂಕೋಲ್ ಉನ್ನತಿಯಲ್ಲಿ ಸಮಾಲೋಚನಾ ಸಭೆ ಶನಿವಾರ ನಡೆಯಿತು. ದೇಲಂಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ನ್ಯಾಯವಾದಿ ಎ.ಪಿ. ಉಷಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಶಾಸಕ ಸಿ.ಎಚ್.ಕುಂಞಂಬು ಉದ್ಘಾಟಿಸಿದರು. ಕಾಸರಗೋಡು ಸಹಾಯಕ ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಕೆ. ವಿ. ರಾಘವನ್ ಯೋಜನೆಯನ್ನು ವಿವರಿಸಿದರು. ದೇಲಂಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಬ್ದುಲ್ಲಕುಂಞÂ್ಞ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಕುಶಲನ್, ತಿಮ್ಮಪ್ಪ ಮಾತನಾಡಿದರು. ಬುಡಕಟ್ಟು ವಿಸ್ತರಣಾಧಿಕಾರಿ ಕೆ. ವೀರೇಂದ್ರಕುಮಾರ್ ಸ್ವಾಗತಿಸಿ, ಗ್ರಾ.ಪಂ. ಸದಸ್ಯೆ ಪ್ರಿಯಾ ಹರೀಶ್ ವಂದಿಸಿದರು.




.jpg)
