ಪೆರ್ಲ: ಪೆರ್ಲ ಶ್ರೀ ಸತ್ಯನಾರಾಯಣ ಭಜನಾ ಮಂದಿರದಲ್ಲಿ ಅಖಂಡ ಏಕಾಹ ಭಜನೆ, ಸಆರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮೇ 8ರಂದು ಜರುಗಲಿದೆ. ವೇದಮೂರ್ತಿ ಶುಳುವಾಲಮೂಲೆ ಶಿವಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ.
ಬೆಳಗ್ಗೆ 6.07ಕ್ಕೆ ದೀಪ ಪ್ರಜ್ವಲನೆ, ಸಾಮೂಹಿಕ ಪ್ರಾರ್ಥನೆಯೊಂದಿಗೆ ಭಜನೆ ಆರಂಭಗೊಳ್ಳುವುದು. ಸಂಜೆ 5.30ಕ್ಕೆ ಶ್ರಿ ಸತ್ಯನಾರಾಯಣ ಪೂಜೆ ಆರಂಭಗೊಳ್ಳುವುದು. ರಾತ್ರಿ 8.45ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯುವುದು. 9ರಂದು ಬೆಳಗ್ಗೆ 6.08ಕ್ಕೆ ಸಾಮೂಹಿಕ ಭಜನೆಯೊಂದಿಗೆ ಅಖಂಡ ಏಕಾಹ ಭಜನೆ ಸಂಪನ್ನಗೊಳ್ಳಲಿದೆ.




