ಕುಂಬಳೆ: ಕುಂಬಳೆ ಪೇಟೆಯ ಹಣ್ಣು ಹಂಪಲು, ಜ್ಯೂಸ್ ಅಂಗಡಿ ವ್ಯಾಪಾರಿ, ಕುಂಬಳೆ ಪೆರುವಾಡಿನ ಕೃಷ್ಣ-ಪ್ರೇಮಾವತಿ ದಂಪತಿ ಪುತ್ರ ಸಂತೋಷ್ ಯಾನೆ ಸಂತು (38)ಅವರ ಮೃತದೇಹ ಅಂಗಡಿ ಕಾಂಪ್ಲೆಕ್ಸಿನ ಮೇಲ್ಭಾಗದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮಂಗಳವಾರ ಮಧ್ಯಾಹ್ನದ ವರೆಗೂ ಅಂಗಡಿವ್ಯಾಪಾರ ನಡೆಸಿದ್ದ ಇವರ ಮೃತದೇಹ ಅರಿಮಲ ಕಾಂಪ್ಲೆಕ್ಸಿನ ಮೇಲ್ಭಾಗದ ಮಹಡಿಗೆ ನೇಣು ಬಿಗಿದ ಸ್ಥಿತಿಯಲ್ಲಿಪತ್ತೆಯಾಗಿತ್ತು. ಸನಿಹ ಬ್ಯಾರಲ್ ಪತ್ತೆಯಾಗಿದ್ದು, ಇದರ ಮೇಲಕ್ಕೇರಿ ನೇಣು ಹಾಕಿಕೊಂಡಿರಬೇಕೆಂದು ಸಂಶಯಿಸಲಾಗಿದೆ. ವ್ಯಾಪಾರಿ ಯೂತ್ ವಿಂಗ್ ಸಂಘಟನೆಯ ಕುಂಬಳೆ ಘಟಕ ಕೋಶಾಧಿಕಾರಿಯಾಗಿದ್ದರು.ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




